ಮುಲ್ಕಿ : ಕವತ್ತಾರು-ಕರ್ನೀರೆ ಗ್ರಾಮದ ದೇoದಡ್ಕ, ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮಾರ್ಚ್ 20ರಿಂದ 25,ರವರೆಗೆ ನಡೆಯಲಿರುವ ಅಷ್ಟಬಂಧ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ದೇವಳದಲ್ಲಿ ನಡೆಯಿತು.
ದೇವಾಲಯದ ಅನುವಂಶಿಕ ಅರ್ಚಕ ಪಿ. ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ನಡೆಯಿತು. ಬ್ರಹ್ಮಕಲಶ ಸಮಿತಿಯ ಗೌರವಾಧ್ಯಕ್ಷ ಗುತ್ತಿನಾರ್ ಸುಧಾಕರ ಶೆಟ್ಟಿ ದೆಪ್ಪುಣಿಗುತ್ತು ,ಅಧ್ಯಕ್ಷ ಪ್ರಮೋದ್ ಪುಟ್ಟಣ್ಣ ಶೆಟ್ಟಿ ದೇoದಡ್ಕ, ಪ್ರಧಾನ ಕಾರ್ಯದರ್ಶಿ ಜನಾನಂದ ಶೆಟ್ಟಿ ತಿಂಗೊಳೆ, ಕಾರ್ಯದರ್ಶಿ ಗಂಗಾಧರ ವಿ.ಶೆಟ್ಟಿ ಬೆರ್ಕೆ ತೋಟ,ಪ್ರಧಾನ ಕೋಶಾಧಿಕಾರಿ ಬಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿಗಳಾದ ಅನಿಲ್ ಕುಮಾರ್ ಪುತ್ತೂರು ಹಾಗೂ ಕಿಶೋರ್ ದೇವಾಡಿಗ ದೇ0ದಡ್ಕ ಪುತ್ತೂರು,ಪ್ರಮುಖರಾದ ರಾಮದಾಸ್ ಶೆಟ್ಟಿ ಪುತ್ತೂರು ಬಾಳಿಕೆಮನೆ,ಪಾಂಡುರಂಗ ಕಾಮತ್ ದೇ0ದಡ್ಕ ಪುತ್ತೂರು, ಪ್ರಭಾಕರ ಶೆಟ್ಟಿ ಸಾಗುಮನೆ,ಗುರುರಾಜ್ ಭಟ್,ನಾಗರಾಜ್ ಭಟ್,ಅಶೋಕ್ ಭಂಡಾರಿ,ದಿನೇಶ್ ಪೂಜಾರಿ, ಕರುಣಾಕರ ಪೂಜಾರಿ ಮಾದಿಗುರಿ,ಗಿರಿಧರ ಕಾಮತ್, ಲಕ್ಷ್ಮಣ ಅಂಚನ್, ಪ್ರಭಾಕರ ಪೂಜಾರಿ,ಗಿರೀಶ್ ಮಡಿವಾಳ, ಪ್ರೀತಮ್ ರೈ, ವಿಜಯ ಶೆಟ್ಟಿ ಇವರೊಂದಿಗೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಬ್ರಹ್ಮಕಲಶಾಭಿಷೇಕದ ಪೂರ್ವ ತಯಾರಿಗಳ ಸಭೆ ನಡೆಯಿತು.

