ರಸ್ತೆಯ ಅತಿಕ್ರಮಣವನ್ನು ನಿಲ್ಲಿಸಲು ಪೊಲೀಸು ನಿರೀಕ್ಷಕರು ತಿಳಿಸಿದ್ದರೂ ಮುಂದುವರಿಕೆ

0
84

ವರದಿ ರಾಯಿ ರಾಜ ಕುಮಾರ

ಮೂಡುಬಿದಿರೆ ತಾಲೂಕಿನ ಪ್ರಾಂತ್ಯ ಗ್ರಾಮದ ಪೇಪರ್ ಮಿಲ್ ಬಳಿಯ ಕೊಟ್ಟಾರಿ ಕಾಂಪೌಂಡ್ ರಸ್ತೆಯಲ್ಲಿ ಆವರಣ ಗೋಡೆಯನ್ನು ರಸ್ತೆಯನ್ನು ಅತಿಕ್ರಮಿಸಿ ಕಟ್ಟಲಾಗುತ್ತಿದೆ. ಈ ಬಗ್ಗೆ ಸ್ಥಳೀಯರು ಮಾಜಿ ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಹಾಗೂ ಇತರ ಸ್ಥಳೀಯರೊಂದಿಗೆ ಜನವರಿ 19 ಸೋಮವಾರದಂದು ಬೆಳಗ್ಗೆ 9:00ಗೆ ಪೊಲೀಸ್ ಠಾಣೆಯ ನಿರೀಕ್ಷಕರಲ್ಲಿ ಮನವಿಯನ್ನು ಅರ್ಪಿಸಿ ನಿರೀಕ್ಷಕರು ಕೆಲಸವನ್ನು ನಿಲ್ಲಿಸುವಂತೆ ತಿಳಿಸಿದರು.

ಆದರೆ ಸಂಬಂಧಪಟ್ಟ ಅತಿಕ್ರಮಣಕಾರರು ಒಮ್ಮೆ ಕೆಲಸವನ್ನು ನಿಲ್ಲಿಸಿದಂತೆ ಮಾಡಿ ಮತ್ತೆ ಅರ್ಧ ಗಂಟೆಯಲ್ಲಿ ಕೆಲಸವನ್ನು ಮುಂದುವರಿಸಿದ ಬಗ್ಗೆ ತಿಳಿದು ಬಂದಿದೆ. ತಕ್ಷಣ ನಿರೀಕ್ಷಕರಲ್ಲಿ ವಿಷಯವನ್ನು ತಿಳಿಸಿದಾಗ ಸ್ವತಹ ತಾನೇ ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮಕ್ಕೆ ಪ್ರಾರಂಭಿಸಿದ್ದಾರೆ. ರಸ್ತೆ ಅತ್ಯಂತ ಅಗಲ ಕಿರಿದಾಗಿದ್ದು ಇದೀಗ ಅತಿಕ್ರಮಣದಿಂದಾಗಿ ಎರಡು ಫೀಟುಗಳಿಗೂ ಕಡಿಮೆ ಅಗಲವನ್ನು ಹೊಂದಿರುತ್ತದೆ. ಆದುದರಿಂದ ರಸ್ತೆಯ ಅತಿಕ್ರಮಣವನ್ನು ನಿಲ್ಲಿಸುವಂತೆ ಪರಿಸರದ ಎಲ್ಲಾ ನಾಗರಿಕರು ಮಾಜಿ ಪುರಸಭಾ ಸದಸ್ಯರುಗಳೊಂದಿಗೆ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ.

ಅತಿಕ್ರಮಣದ ಸಂಧರ್ಭದಲ್ಲಿ ಪುರಸಭೆ ಇಂದ ನಿರ್ಮಿಸಲ್ಪಟ್ಟ ಮಳೆ ನೀರು ಹೋಗುತ್ತಿರುವ ಚರಂಡಿಯನ್ನು ಕೂಡ ಅತಿಕ್ರಮಣ ಮಾಡಿ ಶಾಲಾ ವಾಹನಗಳು ಕೂಡ ಚಲಿಸಲು ಸಾಧ್ಯವಾಗದಂತೆ ನಿರ್ಮಿಸಲಾಗುತ್ತಿದೆ ಎಂದು ಕಂಡು ಬಂದಿದೆ.

LEAVE A REPLY

Please enter your comment!
Please enter your name here