ಕೆಂಪ್ಲಾಜೆ ವನದುರ್ಗಾಪರಮೇಶ್ವರಿ ದೇವಾಲಯದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ

0
29

ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಹೊಸಬೆಟ್ಟು ಗ್ರಾಮದ ಕೆಂಪ್ಲಾಜೆ ಪ್ರದೇಶದಲ್ಲಿ ಶತಮಾನಗಳ ಇತಿಹಾಸ ಹೊಂದಿರುವ ಕ್ಷೇತ್ರ ವನದುರ್ಗಾಪರಮೇಶ್ವರಿ ದೇವಾಲಯ ಬಹಳ ಪ್ರಸಿದ್ಧವಾದುದು. ಮೂಲ ವನದುರ್ಗೆ ಯೊಂದಿಗೆ ಮಹಾ ಗಣಪತಿ, ಸುಬ್ರಹ್ಮಣ್ಯ, ನಾಗಬ್ರಹ್ಮ ಸಾನಿಧ್ಯ ಇದೆ. ಅಭಿವೃದ್ಧಿಯ ದೃಷ್ಟಿಯಿಂದ ಇದೀಗ ಊರವರು ಇತ್ತೀಚೆಗೆ ನಡೆಸಿದ ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿಸಿದಂತೆ ಜೂನ್ 25 ರಂದು ಗಣಹೋಮ, ಆದಿತ್ಯಾದಿನವಗ್ರಹ ಹೋಮ, ಮೃತ್ಯುಂಜಯ ರುದ್ರ ಹೋಮ ದೊಂದಿಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಪ್ರತೀ ಶುಕ್ರವಾರ ನಡೆಯುವ ಊರವರ ಭಜನಾ ಕಾರ್ಯಕ್ರಮವೂ ಬಹಳ ಉತ್ತಮವಾಗಿ ನಡೆಯುತ್ತಿದೆ ಎಂದು ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.

ವರದಿ: ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here