ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಆಯೋಜಿಸಿರುವ ಋಕ್ ಸಂಹಿತಾ ಯಾಗ ಮತ್ತು ಶ್ರೀಮದ್ಭಾಗವತ ಸಪ್ತಾಹದ ಅಂಗವಾಗಿ ಭಕ್ತಿಯ ಘೋಷದಲ್ಲಿ ಈ ಯಾಗದ ಪವಿತ್ರ ಹೊರೆಕಾಣಿಕೆ ಮೆರವಣಿಗೆ ನೆರವೇರಿತು.

ಭಕ್ತಿ, ಪರಂಪರೆ ಮತ್ತು ಸಂಸ್ಕೃತಿಯ ಅದ್ಭುತ ಕ್ಷಣಗಳಿಗೆ ಭಕ್ತ ಮಹಾಸಾಗರ ಸಾಕ್ಷಿಯಾಯಿತು. ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿರುವ ಋಕ್ ಸಂಹಿತಾ ಯಾಗ ಮತ್ತು ಶ್ರೀಮದ್ಭಾಗವತ ಸಪ್ತಾಹದ ಅಂಗವಾಗಿ ನಡೆದ ಭವ್ಯ ಹೊರೆಕಾಣಿಕೆ ಮೆರವಣಿಗೆ ಭಕ್ತಿಯ ಅಲೆಗಳನ್ನು ಮೂಡಿಸಿದೆ.
ಶ್ರೀ ಕೃಷ್ಣ ಮಠದ ರಥಬೀದಿಯಿಂದ ಆರಂಭಗೊಂಡ ಈ ಮೆರವಣಿಗೆ ಕರಂಬಳ್ಳಿ ಶ್ರೀ ವೆಂಕಟರಮಣ ದೇವಾಲಯದವರೆಗೆ ಸಾಗಿದಾಗ ಪ್ರತಿ ಹೆಜ್ಜೆಯಲ್ಲೂ ಭಕ್ತಿ, ಪ್ರತಿ ಕ್ಷಣದಲ್ಲೂ ದೈವಿಕ ಅನುಭವ ಕಂಡುಬಂತು.

ಭಕ್ತಿ, ಸಂಸ್ಕೃತಿ ಮತ್ತು ಸೌಹಾರ್ದತೆಯ ಸಂಕೇತವಾಗಿ ಮೂಡಿಬಂದ ಈ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಚೆಂಡೆ, ವಾದ್ಯಮೇಳ, ಕಲಾ ತಂಡಗಳು, ವಿವಿದ ಗ್ರಾಮಗಳ ಭಕ್ತರು, ಭಜನಾ ಮಂಡಳಿಗಳು, ವಿವಿಧ ಸಂಘಟನೆಗಳು ಸೇರಿದಂತೆ ಭಕ್ತಾದಿಗಳ ಅಪಾರ ಭಾಗವಹಿಸುವಿಕೆಯಿಂದ ಈ ಹೊರೆಕಾಣಿಕೆ ಮೆರವಣಿಗೆ ಯಶಸ್ವಿಯಾಗಿ ನೆರವೇರಿತು. ಪರ್ಯಾಯ ಶ್ರೀ ವೇದವರ್ಧನ ಸ್ವಾಮೀಜಿ ಅವರ ಪವಿತ್ರ ಚಾಲನೆ ಮೆರವಣಿಗೆಗೆ ಮಹತ್ವವನ್ನು ನೀಡಿತು.
ವರದಿ ವಿನೋದ್ ಶೆಟ್ಟಿ ಉಡುಪಿ

