ಧನಂಜಯ ವರ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ‘ಗುರು ರಾಯರುಲ್ಲೆರ್’ ಭಕ್ತಿಗೀತೆ ಬಿಡುಗಡೆ

0
66

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲಿನ ಭಕ್ತಿ, ಶರಣಾಗತಿ ಹಾಗೂ ಅಚಲ ನಂಬಿಕೆಯನ್ನು ಸಾರುವ ‘ಗುರು ರಾಯರುಲ್ಲೆರ್’ ಎಂಬ ನೂತನ ಭಕ್ತಿಗೀತೆ ಧನಂಜಯ ವರ್ಮ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

ಶ್ರೀ ರಾಘವೇಂದ್ರ ಸ್ವಾಮಿಗಳ ಕೃಪೆಯನ್ನು ಕೋರುವ ಭಕ್ತನ ಮನದಾಳದ ಭಾವನೆಗಳನ್ನು ಈ ಗೀತೆಯಲ್ಲಿ ಹೃದಯಸ್ಪರ್ಶಿಯಾಗಿ ಕಟ್ಟಿಕೊಡಲಾಗಿದೆ. ಗುರುಕೃಪೆಯ ನಿರೀಕ್ಷೆಯನ್ನು ಮನಮುಟ್ಟುವ ರೀತಿಯಲ್ಲಿ ಮೂಡಿಸಲಾಗಿದೆ. ಮಂತ್ರಾಲಯದ ಗುರು ರಾಯರ ಸನ್ನಿಧಿಯೇ ತನ್ನ ಆಶ್ರಯ ಎಂಬ ಭಾವನೆ ಗೀತೆಯುದ್ದಕ್ಕೂ ವ್ಯಕ್ತವಾಗುತ್ತದೆ.
ಗೀತೆಗೆ ಧನಂಜಯ ವರ್ಮ ಧ್ವನಿ ನೀಡಿದ್ದು, ಪ್ರಕಾಶ್ ಬಂಗೇರ ಬಾಗಂಬಿಲ ಗೀತರಚನೆ ಮಾಡಿದ್ದಾರೆ. ಸಂದೇಶ್ ಬಾಬಣ್ಣ ಮಿಕ್ಸಿಂಗ್ ಹಾಗೂ ಮಾಸ್ಟರಿಂಗ್ ನಿರ್ವಹಿಸಿದ್ದು, ಪ್ರಣವ್ ಎಡಿಟಿಂಗ್ ಜವಾಬ್ದಾರಿ ವಹಿಸಿದ್ದಾರೆ. ಕಿರಣ್ ಮತ್ತು ಪ್ರಕಾಶ್ ಡಿಒಪಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಸಂತೋಷ್ ಶೆಟ್ಟಿ ಕುಂಬ್ಳೆ ಹಾಗೂ ಸುಚಿತ್ರಾ ಡಿ. ವರ್ಮ ನಿರ್ಮಾಪಕರಾಗಿ, ರಿಚರ್ಡ್ ಪಿಂಟೋ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
‘ಗುರು ರಾಯರುಲ್ಲೆರ್’ ಭಕ್ತಿಗೀತೆಯನ್ನು ಧನಂಜಯ ವರ್ಮ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಿ ಹಾಗೂ ಆಲಿಸಬಹುದಾಗಿದೆ.

ವರದಿ ರಾಯಿ ರಾಜ ಕುಮಾರ್