ಭಾರತಕ್ಕೆ ವಿಶ್ವ ವೇದಿಕೆಯಲ್ಲಿ ಕೀರ್ತಿ ತಂದ ಧನಲಕ್ಷ್ಮಿ ಪೂಜಾರಿಗೆ ದ.ಕ. ಜಿಲ್ಲೆಯ ಗೌರವಾನ್ವಿತ ಸ್ವಾಗತ

0
158

ದಕ್ಷಿಣ ಕನ್ನಡ ಜಿಲ್ಲೆಯ ಹಿರಿಮೆಯನ್ನು ಬಾನೆತ್ತರಕ್ಕೆ ಹಾರಿಸಿದ, 2025 ರ ವಿಶ್ವ ಕಪ್ ಮಹಿಳಾ ಸೀನಿಯರ್ ಕಬಡ್ಡಿಯಲ್ಲಿ , ಭಾರತ ತಂಡದ ಪರವಾಗಿ ಪ್ರತಿನಿಧಿಸಿದ ಕರ್ನಾಟಕದ ಏಕೈಕ ಮಹಿಳೆ .ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ಸುರತ್ಕಲ್ ಮೂಲದ ಧನಲಕ್ಷ್ಮಿ ಪೂಜಾರಿ ಸುರತ್ಕಲ್ ಇವರು ಆಳ್ವಾಸ್ ಮೂಡುಬಿದಿರೆ ಕಾಲೇಜಿನ ವಿದ್ಯಾರ್ಥಿನಿ. ಅತ್ಯದ್ಬುತ ಸಾಧನೆಯನ್ನು ಮಾಡಿ ಕೋಟ್ಯಾಂತರ ಕ್ರೀಡಾಭಿಮಾನಿಗಳ ಹೃದಯ ಗೆದ್ದ ಯಶಸ್ವಿ ಸಾಧಕಿ. ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ, ದಕ್ಷಿಣ ಕನ್ನಡ ಜಿಲ್ಲಾ ಅಮೇಚೂರ್ ಕಬಡ್ಡಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮಾನ್ ರಾಕೇಶ್ ಮಲ್ಲಿ ಯವರು ಅಭಿನಂದಿಸಿ ಅವರ ಉಜ್ವಲ ಭವಿಷ್ಯಕ್ಕೆ ಆಶೀರ್ವದಿಸಿದರು .

LEAVE A REPLY

Please enter your comment!
Please enter your name here