ತುಂಬೆ ವಿಶ್ವಜ್ಯೋತಿ ಯುವಕ ಮಂಡಲ ಮತ್ತು ಮಾತೃ ಮಂಡಳಿ ಇದರ ನೂತನ ಕಟ್ಟಡ ರಚನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜುರಾದ 1 ಲಕ್ಷ ರೂ ಅನುದಾನದ ಮಂಜುನಾಥ ಪತ್ರ ಹಸ್ತಾಂತರ
ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಬಂಟ್ವಾಳ ತಾಲೂಕಿನ ತುಂಬೆ ವಿಶ್ವಜ್ಯೋತಿ ಯುವಕ ಮಂಡಲ ಮತ್ತು ಮಾತೃ ಮಂಡಳಿ ಇದರ ನೂತನ ಕಟ್ಟಡ ರಚನೆಗೆ 1 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಮಂಜೂರಾತಿ ಪತ್ರವನ್ನು ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ ರವರು ಯುವಕ ಮಂಡಲದ ಅಧ್ಯಕ್ಷರಾದ ಪೂವಪ್ಪ ಪೂಜಾರಿ ಇವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೇಂದ್ರ ಒಕ್ಕೂಟದ ನಿಕಟಪೂರ್ವ ಪೂರ್ವ ಅಧ್ಯಕ್ಷರಾದ ಮಾಧವ ವಲವೂರು,ತುಂಬೆ ವಲಯದ ಮೇಲ್ವಿಚಾರಕಿ ಮಮತಾ,ಸೇವಾ ಪ್ರತಿನಿಧಿ ಅನಿತ, ಯುವಕ ಮಂಡಲ ಮತ್ತು ಮಾತೃ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

