ಕಾರ್ಕಳ : ಶಿಕ್ಷಣಕ್ಕೆ ಒತ್ತುಕೊಡುವ ಜಮೀಯತುಲ್ ಫಾಲ್ಲಹಾ ಕಾರ್ಕಳ ಘಟಕ ದಿಂದ ಕಾರ್ಕಳ ಸಾಲ್ಮರದ ಉರ್ದು ಶಾಲೆಗೆ ದಾನಿಗಳ ಸಹಾಯದಿಂದ ಪುಸ್ತಕ, ಶಾಲಾ ಬ್ಯಾಗ್ ಗಳು ಹಾಗೂ ಕೊಡೆಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಘಟಕದ ಜೊತೆ ಕಾರ್ಯದರ್ಶಿ ನಾಸಿರ್ ಶೇಕ್ ಮಾತನಾಡಿ ಇಂಥ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಿದೆ.
ಮಕ್ಕಳಿಗೆ ಸಿಗುವ ಸರಕಾರಿ ಸವಲತ್ತುಗಳನ್ನು ಕಾಯದೆ ದಾನಿಗಳು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ಕುಂದು ಕೊರತೆ ಬರದ ಹಾಗೆ ನೀಡುವ ಪ್ರೋತ್ಸಾಹದಿಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ತುಂಬಾ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಜಮೀಯತುಲ್ ಫಲಹ ಉಭಯ ಜಿಲ್ಲಾ ಘಟಕದ ಅಧ್ಯಕ್ಷರಾದ ಅಷ್ಪಕ್ ಅಹಮದ್ ಮಾತನಾಡಿದ ಅವರು ನಮ್ಮ ಜಿಲ್ಲೆಯಲ್ಲಿ ಬೆರಣಿಕೆಯಷ್ಟು ಸರಕಾರಿದ್ದು ಶಾಲೆಗಳಿದ್ದು ಕಾರ್ಕಳದ ಉರ್ದು ಶಾಲೆಗೆ 140 ವರ್ಷಗಳ ಇತಿಹಾಸವಿದೆ ಅದಲ್ಲದೆ ಕಾರ್ಕಳದ ಉರ್ದು ಶಾಲೆಯಲ್ಲಿ ಅತ್ಯಂತ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಇದಕ್ಕೆ ಕಾರಣ ಈ ವಿದ್ಯಾರ್ಥಿಗಳಿಗೆ ದಾನಿಗಳಿಂದ ಸಿಗುವ ಸವಲತ್ತುಗಳು. ಈ ಶಾಲೆಯಲ್ಲಿ ಹಲವಾರು ಕುಂದು ಕೊರತೆಗಳಿದ್ದರೂ ದಾನಿಗಳ ಪ್ರೋತ್ಸಾಹದಿಂದ ಇಲ್ಲಿಯ ವಿದ್ಯಾರ್ಥಿಗಳಿಗೆ ಅತ್ಯುತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.

ಅದಲ್ಲದೆ ಇಲ್ಲಿ ಹಳೆ ವಿದ್ಯಾರ್ಥಿಗಳು ಶಾಸಕರಾಗಿದ್ದು ಇತ್ತೀಚೆಗೆ ಇಲ್ಲಿಯ ಓರ್ವ ಹಳೆ ವಿದ್ಯಾರ್ಥಿ ಪರೀಕ್ಷೆಗಳಲ್ಲಿ ಅತಿ ಕಠಿಣವಾದ ಪರೀಕ್ಷೆಯಾದ ಐಎಎಸ್ ವಿದ್ಯಾಭ್ಯಾಸ ಪೂರ್ಣಗೊಳಿಸಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿರುವುದು ಈ ಉರ್ದು ಶಾಲೆಗೆ ಸಂದ ಕೀರ್ತಿಯಾಗಿದೆ ಎಂದು ಹೇಳಿದರು.

ನಮ್ಮ ಮಕ್ಕಳನ್ನು ಇಂತಹ ಸರಕಾರಿ ಶಾಲೆಗೆ ಸೇರಿಸಿ ಸರಕಾರಿ ಶಾಲೆಗಳನ್ನು ಬೆಳೆಸಬೇಕೆಂದು ಹೇಳಿದರು. ವೇದಿಕೆಯಲ್ಲಿ ಕಾರ್ಕಳ ಘಟಕದ ಅಧ್ಯಕ್ಷರಾದ ಹಾಗೂ ಪುಸ್ತಕಗಳನ್ನು ನೀಡಿದ ದಾನಿಗಳಾದ ಮೊಹಮ್ಮದ್ ಗೌಸ್, ದಾನಿಗಳಾದ ಮೊಹಮ್ಮದ್ ಅಸ್ಲಾಂ, ದಾನಿಗಳಾದ ನದೀಂ ಕುಂಟಲ ಪಾಡಿ, ತಾಜ್ ಮೊಹಮ್ಮದ್, ಅಬ್ಬಾಸ್ ಸಾಹೇಬ್, ಅಬ್ದುಲ್ಲ, ಮೊಹಮದ್ ಸಾಹೇಬ್, ಪ್ರಭಾರ ಮುಖ್ಯ ಉಪಾಧ್ಯಾಯರಾದ ಸಾಯಿರಾಬಾನು, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ರಿಯಾಜ್, ವಸಂತಿ,
ಉಪಸ್ಥಿತರಿದ್ದು ವಿದ್ಯಾರ್ಥಿ ಸಾಬಿತ್ ಕುರಾನ್ ಪಟನೆ ಮಾಡಿದರು. ಶಿಕ್ಷಕಿ ಸೌಮ್ಯ ಸ್ವಾಗತಿಸಿ ಗುಣವತಿ ಪ್ರಾಸ್ತವಿ ಕ ಭಾಷಣ ಮಾಡಿದರು.

