ಕೊರಗ ಸಮಾಜದಕೊರಗ ಸಮಾಜಕ್ಕೆ 9 ತಿಂಗಳಿಂದ ಆಹಾರ ಧಾನ್ಯ ವಿತರಣೆ ಸ್ಥಗಿತ: ಕೆ. ವಿಜಯ ಕೊಡವೂರು ಆಕ್ಷೇಪ

0
31

ಕೊಡವೂರು : ಕೊರಗ ಸಮಾಜದ ಕುಟುಂಬಗಳಿಗೆ ಉಚಿತವಾಗಿ ವಿತರಿಸಲಾಗುವ ಅಕ್ಕಿ ಸೇರಿದಂತೆ ಅಗತ್ಯ ದವಸ ಧಾನ್ಯಗಳು ಹಾಗೂ ಇತರ ವಸ್ತುಗಳನ್ನು ಕಳೆದ 9 ತಿಂಗಳಿಂದ ವಿತರಿಸಿಲ್ಲ ಎಂಬ ವಿಚಾರವನ್ನು ಮುಂದಿಟ್ಟುಕೊಂಡು, ನಿಕಟ ಪೂರ್ವ ನಗರಸಭಾ ಸದಸ್ಯರಾದ ಕೆ. ವಿಜಯ ಕೊಡವೂರು ಅವರು ಉಡುಪಿ ಜಿಲ್ಲೆಯ ಮಣಿಪಾಲದ ರಜತಾದ್ರಿಯಲ್ಲಿರುವ ಐ.ಟಿ.ಡಿ.ಪಿ. (ITDP) ಯೋಜನಾ ಸಮನ್ವಯಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿ, ಕೊರಗ ಸಮಾಜಕ್ಕೆ ನೀಡಲಾಗುವ ಉಚಿತ ಆಹಾರ ಧಾನ್ಯಗಳು ಹಾಗೂ ಇತರ ಸೌಲಭ್ಯಗಳ ವಿತರಣೆಯಲ್ಲಿ ವಿಳಂಬವಾಗಿರುವ ಕುರಿತು ಮಾಹಿತಿ ಪಡೆದುಕೊಂಡರು.

ಕೊರಗ ಸಮಾಜದ ಕುಟುಂಬಗಳಿಗೆ ತೊಂದರೆಯಾಗದಂತೆ ಬಾಕಿ ಇರುವ ಆಹಾರ ಧಾನ್ಯಗಳು ಹಾಗೂ ಇತರ ಅಗತ್ಯ ವಸ್ತುಗಳನ್ನು ಆದಷ್ಟು ಶೀಘ್ರವಾಗಿ ವಿತರಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸಂಬಂಧಪಟ್ಟ ಇಲಾಖೆಯು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕೊರಗ ಸಮಾಜದ ಕುಟುಂಬಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

— ಕೆ. ವಿಜಯ ಕೊಡವೂರು ನಿಕಟ ಪೂರ್ವ ನಗರಸಭಾ ಸದಸ್ಯರು ಕುಟುಂಬಗಳಿಗೆ ಉಚಿತವಾಗಿ ವಿತರಿಸಲಾಗುವ ಅಕ್ಕಿ ಸೇರಿದಂತೆ ಅಗತ್ಯ ದವಸ ಧಾನ್ಯಗಳು ಹಾಗೂ ಇತರ ವಸ್ತುಗಳನ್ನು ಕಳೆದ 9 ತಿಂಗಳಿಂದ ವಿತರಿಸಿಲ್ಲ ಎಂಬ ವಿಚಾರವನ್ನು ಮುಂದಿಟ್ಟುಕೊಂಡು, ನಿಕಟ ಪೂರ್ವ ನಗರಸಭಾ ಸದಸ್ಯರಾದ ಕೆ. ವಿಜಯ ಕೊಡವೂರು ಅವರು ಉಡುಪಿ ಜಿಲ್ಲೆಯ ಮಣಿಪಾಲದ ರಜತಾದ್ರಿಯಲ್ಲಿರುವ ಐ.ಟಿ.ಡಿ.ಪಿ. (ITDP) ಯೋಜನಾ ಸಮನ್ವಯಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿ, ಕೊರಗ ಸಮಾಜಕ್ಕೆ ನೀಡಲಾಗುವ ಉಚಿತ ಆಹಾರ ಧಾನ್ಯಗಳು ಹಾಗೂ ಇತರ ಸೌಲಭ್ಯಗಳ ವಿತರಣೆಯಲ್ಲಿ ವಿಳಂಬವಾಗಿರುವ ಕುರಿತು ಮಾಹಿತಿ ಪಡೆದುಕೊಂಡರು.

ಕೊರಗ ಸಮಾಜದ ಕುಟುಂಬಗಳಿಗೆ ತೊಂದರೆಯಾಗದಂತೆ ಬಾಕಿ ಇರುವ ಆಹಾರ ಧಾನ್ಯಗಳು ಹಾಗೂ ಇತರ ಅಗತ್ಯ ವಸ್ತುಗಳನ್ನು ಆದಷ್ಟು ಶೀಘ್ರವಾಗಿ ವಿತರಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸಂಬಂಧಪಟ್ಟ ಇಲಾಖೆಯು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕೊರಗ ಸಮಾಜದ ಕುಟುಂಬಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

— ಕೆ. ವಿಜಯ ಕೊಡವೂರು ನಿಕಟ ಪೂರ್ವ ನಗರಸಭಾ ಸದಸ್ಯರು