ಬೋಳೂರು : ಜುಲೈ 2, 2025 ರಂದು, ಬೋಳೂರು ಸಾವಿತ್ರಿ ವಾಸುದೇವ ರಾವ್ ಚಾರಿಟೇಬಲ್ ಟ್ರಸ್ಟ್(ರಿ), ಅಶೋಕನಗರ ಹಿರಿಯ ಪ್ರಾಥಮಿಕ ಶಾಲೆಯ (ಕನ್ನಡ ಮಾಧ್ಯಮ) 106 ವಿದ್ಯಾರ್ಥಿಗಳಿಗೆ ಪಾದರಕ್ಷೆಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸೀತಾರಾಮ್ ಪುರಾಣಿಕ್ (ಶಾಲಾ ಸಂಚಾಲಕರ ಪ್ರತಿನಿಧಿ), ಶ್ರೀ ಶ್ರೀನಿವಾಸ್ ಬೈಕಾಡಿ (ವಿದ್ಯಾವರ್ಧಕ ಸಂಘದ ಸದಸ್ಯ) ಮತ್ತು ಜಾಯ್ಸ್ ಹೆನ್ರಿಟಾ (ಶಾಲಾ ಪ್ರಾಂಶುಪಾಲರು) ಭಾಗವಹಿಸಿದ್ದರು. ಟ್ರಸ್ಟ್‌ನ ಟ್ರಸ್ಟಿ ಬಾಲಕೃಷ್ಣ ಹೊಸಬೆಟ್ಟು ಹಾಗೂ ಶಾಲಾ ಸಂಚಾಲಕರು ವಿದ್ಯಾರ್ಥಿಗಳನ್ನುದ್ದೇಶಿಸಿ ಹಿತಾನುಡಿಗಳನ್ನಾಡಿದರು. ಟ್ರಸ್ಟ್‌ನ ಅಧ್ಯಕ್ಷೆ ಸಾವಿತ್ರಿ ವಾಸುದೇವ ರಾವ್, ಟ್ರಸ್ಟಿಗಳಾದ ಜೇಷ್ಠಲಕ್ಷ್ಮಿ ಬೋಳೂರು ಮತ್ತು ಶ್ರೀರಾಮ್ ವಿ ರಾವ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಸಿಹಿ ತಿಂಡಿ ಹಂಚಲಾಯಿತು.