ಲಯನ್ಸ್ ಕ್ಲಬ್ ಸೋಮೇಶ್ವರದ ಸೇವಾ ಅಂಗವಾಗಿ ಅನುದಾನಿತ ಸ್ಟೆಲ್ಲಾ ಮಾರಿಸ್ ಶಾಲೆ ಬೀರಿಯ ಕಣ್ಣಿನ ದ್ರಷ್ಟಿದೋಷವಿರುವ ವಿದ್ಯಾರ್ಥಿಗಳಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು.
ಅನುದಾನಿತ ಸ್ಟೆಲ್ಲಾ ಮೇರೀಸ್ ಶಾಲೆ ಬೀರಿಯಲ್ಲಿ ನಡೆದ ಸಭೆಯಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷ ಲಯನ್ ವಿಜಯನ್ ಕೆ. ವಹಿಸಿದ್ದರು, ಲಯನ್ಸ್ ಜಿಲ್ಲೆ 317D ಯ ಹೆಚ್ಚುವರಿ ಸಂಪುಟ ಕಾರ್ಯದರ್ಶಿ ಲಯನ್ ಚಂದ್ರಹಾಸ್ ರೈ ಕನ್ನಡಕ ವಿತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲಯನ್ ಕೆ. ಶಶಿ ಕುಮಾರ್ ನಾಯರ್ , ನಾಗರಾಜ್ ಗಟ್ಟಿ , ರಾಘವನ್ ಮೂತಾಲ್, ಫ್ಲೇವಿಯಾ ಡಿ’ಸೋಜಾ, ನಿರ್ಮಿತಾ ಭಂಡಾರಿ ಉಪಸ್ಥಿತರಿದ್ದರು .ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಪ್ರಸಿಲ್ಲಾ ಸ್ವಾಗತಿಸಿದರು ಮತ್ತು ಖಜಾಂಚಿ ಲಯನ್ ನಿತೀಶ್ ಕೃಷ್ಣ ಧನ್ಯವಾದ ಅರ್ಪಿಸಿದರು.

