ಸಾಸ್ತಾನ ಶಾಲಾ ವಿದ್ಯಾರ್ಥಿಗಳಿಗೆ ಗುರುತು ಪತ್ರ ವಿತರಣೆ

0
28

ನಮ್ಮ ನಾಡ ಒಕ್ಕೂಟ ಬ್ರಹ್ಮಾವರ ತಾಲೂಕು ಘಟಕದ ವತಿಯಿಂದ ಸಾಸ್ತಾನ ಏಡಬೆಟ್ಟು ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆya ವಿದ್ಯಾರ್ಥಿಗಳಿಗೆ ಉಡುಪಿ ಜಿಲ್ಲಾ ಉಪಾಧ್ಯಕ್ಷ ಹರೂನ್ ರಶೀದ್ ರವರು ಕೊಡಮಾಡಿದ ಗುರುತು ಪತ್ರ ವಿತರಣ ಕಾರ್ಯಕ್ರಮ ಇತ್ತೀಚಿಗೆ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಅಧ್ಯಕ್ಷತೆಯನು ನಮ್ಮ ನಾಡ ಒಕ್ಕೂಟ ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ಶಾಕಿರ್ ಹಾವಂಜೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿ ಸದಸ್ಯರಾದ ಮುಸ್ತಾಕ್ ಅಹಮದ್ ಬೆಳ್ವೆ ,ಪಾಂಡೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಘವೇಂದ್ರ ,ಉಡುಪಿ ಜಿಲ್ಲಾ ಉಪಾಧ್ಯಕ್ಷ ಹಾರೂನ್ ರಶೀದ್ ಸಾಸ್ತಾನ , ಬ್ರಹ್ಮಾವರ ಘಟಕ ಖಜಾಂಚಿ ಜಹೀರ್ ಮೊಹಮ್ಮದ್ , ಕಾರ್ಯದರ್ಶಿ ಅಫ್ತಾಬ್ ಅಬ್ದುಲ್ ರಝಾಕ್ ತಾಲೂಕು ಉಪಾಧ್ಯಕ್ಷ ಅಜ್ಮಲ್ ಅಸಾಧಿ , ಶಾಲಾ ಮುಖ್ಯೋಪಾಧ್ಯಾಯಿನಿ ಇಂದಿರಾ ಉಪಸ್ತಿತರಿದ್ದರು. ಶಾಲಾ ಸಂಚಾಲಕಿ ಶಶಿಕಲಾ ಐತಾಳ್ ಸ್ವಾಗತಿಸಿದರು.ನಮ್ಮ ನಾಡ ಒಕ್ಕೂಟ ಜಿಲ್ಲಾ ಪ್ರದಾನ ಕಾರ್ಯದರ್ಶಿ ಫಾಝಿಲ್ ವಂದಿಸಿದರು.ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ತಿರಿದ್ದರು.

LEAVE A REPLY

Please enter your comment!
Please enter your name here