ಮೂಡುಬಿದಿರೆ ಪ್ರೇರಣಾ ಶಾಲೆಯಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ

0
41


ಮೂಡುಬಿದಿರೆ: ಇಂದು ವಿಶ್ವದಾದ್ಯಂತ ಯೋಗವನ್ನು ಅಳವಡಿಸಿಕೊಳ್ಳಲು ಭಾರತ ನಾಯಕತ್ವ ವಹಿಸಿದೆ. ಆರೋಗ್ಯಕರ ಸಮಾಜಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ ಯೋಗ ಇಂದು ವಿಶ್ವಾದ್ಯಂತ ಮಹತ್ವ ಪಡೆದಿದೆ. ಜೀವನಕ್ಕೆ ಪೂರಕವಾದ ಯೋಗವನ್ನು ಶಾಲೆಗಳಲ್ಲಿ ಶಿಕ್ಷಣ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.
ಕಡಲಕೆರೆ ಪ್ರೇರಣಾ ಶಾಲೆಯಲ್ಲಿ ಜರುಗಿದ ವಿದ್ಯಾಭಾರತಿಯ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ವಿವೇಕ್ ಆಳ್ವ ಮುಖ್ಯ ಅತಿಥಿಯಾಗಿ ಮಾತನಾಡಿ, ಯೋಗವು ಭಾರತೀಯ ಸಂಸ್ಕೃತಿಯ ಭಾಗವಾಗಿದೆ ಎಂದರು.
ಶಾಲಾ ಸಂಚಾಲಕ ಶಾಂತರಾಮ ಕುಡ್ವ ಅಧ್ಯಕ್ಷತೆವಹಿಸಿ, ಯೋಗದಿಂದ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಯೋಜನಗಳಿವೆ. ಯೋಗ ಮಾಡುವುದರಿಂದ ಹಲವಾರು ರೋಗಗಳನ್ನು ನಿವಾರಿಸಬಹುದು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ . ಪತಂಜಲಿ ಮಹರ್ಷಿಗಳಿಂದ ವ್ಯಾಪಕವಾಗಿ ಪ್ರಾರಂಭವಾದ ಯೋಗದ ಉಲ್ಲೇಖ ಮಹಾಭಾರತ, ರಾಮಾಯಣ ಗ್ರಂಥಗಳಲ್ಲೂ ಇದೆ ಎಂದರು.
ಸೇವಾಂಜಲಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ರಾಜೇಶ ಬಂಗೇರ, ವಿದ್ಯಾಭಾರತಿಯ ಖೇಲ್ ಖೂದ್ ಪ್ರಮುಖ್ ಕರುಣಾಕರ, ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ಉಪಸ್ಥಿತರಿದ್ದರು.
ಶಿಕ್ಷಕಿ ಸುಚಿತ್ರಾ ನಿರೂಪಿಸಿದರು.

LEAVE A REPLY

Please enter your comment!
Please enter your name here