ಮಾಸ್ಕ್​​ ಮೆನ್ ಚಿನ್ನಯ್ಯ 10 ದಿನ SIT ಕಸ್ಟಡಿಗೆ

0
160

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್​ ಟ್ವಿಸ್ಟ್ ಸಿಕ್ಕಿದೆ. ಸುದೀರ್ಘ ವಿಚಾರಣೆ ಬಳಿಕ ಚಿನ್ನಯ್ಯನನ್ನು ಬಂಧಿಸಲಾಯಿತು. ವೈದ್ಯಕೀಯ ಪರೀಕ್ಷೆ ಬಳಿಕ ಈತನನ್ನು ಕೋರ್ಟ್​ ಮುಂದೆ ಹಾಜರು ಪಡಿಸಲಾಯಿತು. ಇಷ್ಟು ದಿನ ಮಾಸ್ಕ್ ಹಾಕಿಕೊಂಡು ಕಾಣಿಸಿಕೊಳ್ತಿದ್ದ ಚಿನ್ನಯ್ಯ ಮಾಸ್ಕ್​​ ತೆರೆದು ನ್ಯಾಯಾಧೀಶರ ಮುಂದೆ ಬಂದಿದ್ದ. ಈತನನ್ನು 10 ದಿನಗಳ ಕಾಲ SIT ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ಚಿನ್ನಯ್ಯ 10 ದಿನ ಎಸ್​ಐಟಿ ಕಸ್ಟಡಿಗೆ

ಹಲವು ವರ್ಷಗಳ ಹಿಂದೆ ಶವಗಳನ್ನು ತಾನು ಹೂತಿದ್ದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದ ಮಾಸ್ಕ್​ ಮ್ಯಾನ್  ಚಿನ್ನಯ್ಯನ ಮುಖವಾಡ ಇದೀಗ ಕಳಚಿ ಬಿದ್ದಿದೆ. ಸುಳ್ಳು ಮಾಹಿತಿ ನೀಡಿದ್ದ ಆರೋಪದಡಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಇದೇ ವೇಳೆ 10 ದಿನಗಳ ಕಾಲ ಎಸ್​ಐಟಿ ಕಸ್ಟಡಿಗೆ ನೀಡಲು ಎಸ್​ಐಟಿ ಮನವಿ ಮಾಡಿತ್ತು.

ಕೋರ್ಟ್​ನಿಂದ ಹೊರ ಬಂದ ಚಿನ್ನಯ್ಯ!

ಎಸ್​ಐಟಿ ಮನವಿಯಂತೆ ನ್ಯಾಯಾಧೀಶರು ಚಿನ್ನಯ್ಯನನ್ನು 10 ದಿನಗಳ ಕಾಲ ಎಸ್​ಐಟಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ. ಚಿನ್ನಯ್ಯನನ್ನು ಎಸ್​​ಐಟಿ ತೀವ್ರ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದ್ದು, ಮಾಸ್ಕ್ ಮ್ಯಾನ್ ಹಿಂದಿರುವ ನಿಗೂಢ ಕೈವಾಡಗಳು ಕೂಡ ಬಯಲಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

LEAVE A REPLY

Please enter your comment!
Please enter your name here