ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಸನ್ಮಾನ

0
61

ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ, ವಿವೇಕ ಕೋಚಿಂಗ್ ಸೆಂಟರ್ ಕುಂದಾಪುರ ಹಾಗು ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಝೋನ್ ಇವರ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಹಾಗು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಡಾ ಅಂಪಾರು ನಿತ್ಯಾನಂದ ಶೆಟ್ಟಿ ಯವರನ್ನು ಹಾಗು ಡಾ ಶೈಖ್ ವಾಹಿದ್ ದಾವುದ್ ರವರನ್ನು ಕುಂದಾಪುರ ದ ಏನ್ ಏನ್ ಒ ಕಮ್ಯೂನಿಟಿ ಮಿನಿ ಹಾಲ್ ನಲ್ಲಿ ಸನ್ಮಾನಿಸಲಾಯಿತು.
ಮುತ್ತು ಮಹಲ್ ಸಂಕಿರ್ಣ ದ ಮಾಲಕರಾದ ಡಾ ವೈ ಎಸ್ ಹೆಗ್ಡೆ ಯವರು ಸನ್ಮಾನಿಸಿದರು.
ಸಮಾರಂಭ ದಲ್ಲಿ ಏನ್ ಏನ್ ಒ ಖಜಾಂಚಿ ಪೀರು ಸಾಹೇಬ್, ಏನ್ ಏನ್ ಒ ಕಮ್ಯುನಿಟಿ ಸೆಂಟರ್ ನ ಉಪಾಧ್ಯಕ್ಷ ರಾದ ಜಮಾಲ್ ಗುಲ್ವಾಡಿ, ಅಕ್ರಮ್ ಪೀರು ಉಡುಪಿ, ಲಯನ್ಸ್ ಕ್ಲಬ್ ವೆಯಿಟ್ ಝೋನ್ ಇದರ ಅಧ್ಯಕ್ಷ ರಾದ ವಿಜಯ ಭಂಡಾರಿ, ಅಧ್ಯಾಪಕರಾದ ಗಣೇಶ್ ಉಪಸ್ಥಿತರಿದ್ದರು.
ವಿವೇಕ ಕೋಚಿಂಗ್ ಸೆಂಟರ್ ನ ನಿರ್ದೇಶಕರಾದ ಕಿರಣ್ ದೇವಾಡಿಗ ಸ್ವಾಗತಿಸಿದರು, ಏನ್ ಏನ್ ಒ ಕಮ್ಯೂನಿಟಿ ಸೆಂಟರ್ ನ ಪ್ರದಾನ ಕಾರ್ಯದರ್ಶಿ ಹುಸೇನ್ ಹೈಕಾಡಿ ಕಾರ್ಯಕ್ರಮ ನಿರೂಪಿಸಿ  ವಂದಿಸಿದರು.

LEAVE A REPLY

Please enter your comment!
Please enter your name here