ಯುವವಾಹಿನಿ ಕುಪ್ಪೆಪದವು ಎಡಪದವು ಘಟಕದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ಭಜನಾ ಸಂಕೀರ್ತನೆ, ಧಾನ್ಯ ಪೂಜೆ, ಹಾಗು ಗೋವು ಪೂಜೆ, ಕಾರ್ಯಕ್ರಮವು ಕುಲವೂರು ಹೊಸಹೊಕ್ಲು ಸತೀಶ್. ಕೆ .ಎಂ ಅವರ ಮನೆಯಲ್ಲಿ ನೆರವೇರಿಸಿ ಮಾತನಾಡಿದ ಘಟಕದ ಅಧ್ಯಕ್ಷರಾದ ಎಡಪದವು ಶ್ರೀ ಗೋಪಾಲ ಪೂಜಾರಿಯವರು ವಿದ್ಯೆ ಉದ್ಯೋಗ ಸಂಪರ್ಕ ಎಂಬ ಧ್ಯೆಯವಾಕ್ಯದೊಂದಿಗೆ ಕಾರ್ಯಾಚರಿಸುತ್ತಿರುವ ಯುವವಾಹಿನಿ ಸಂಸ್ಥೆಯ ಘಟಕದ ವತಿಯಿಂದ ಆಯೋಜಿಸಲಾದ ಧಾನ್ಯ ಪೂಜೆ, ಹಾಗು ಗೋವು ಪೂಜೆ ಕಾರ್ಯವು ಇಂದಿನ ಯುವಜನತೆಗೆ ಮತ್ತು ಸಮಾಜಕ್ಕೆ ಉತ್ತಮ ಸಂಸ್ಕಾರ ಮತ್ತು ಸಾಂಸ್ಕೃತಿಕ, ಮೌಲ್ಯಗಳನ್ನು ಪರಿಚಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ, ಇಂಥಾ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದ ನಾವೆಲ್ಲರೂ ಧನ್ಯರು ಎಂದು ಹೇಳಿದರು, ಪೂಜಾ ಕಾರ್ಯದ ನಂತರ ಪ್ರಸಾದ ವಿತರಣೆ, ನಡೆಯಿತು.

ಈ ಸಂದರ್ಭದಲ್ಲಿ ಈ ಕಾರ್ಯಕ್ರಮಗಳಿಗೆ ಸಂಪೂರ್ಣ ವ್ಯವಸ್ಥೆ ಕಲ್ಪಿಸಿ ಕೊಟ್ಟಿರುವ ಸತೀಶ್ ಮತ್ತು ಪೂರ್ಣಿಮಾ ದಂಪತಿಗಳನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು, ಈ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ರಾದ ಅಜಯ್ ಅಮೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳಾದ ಶ್ರೀ ಸತೀಶ್ ಕೆ ಎಂ, ಜಗದೀಶ್ ದುರ್ಗಾಕೊಡಿ, ಸೌಮ್ಯ ಕೋಟ್ಯಾನ್, ಅಕ್ಷಿತ್ ಕುಮಾರ್, ಶ್ರೀಧರ್ ಪೂಜಾರಿ ಘಟಕದ ಪ್ರದಾನ ಕಾರ್ಯದರ್ಶಿ ಸಂತೋಷ್ ಬೊಲಿಯ ಸ್ವಾಗತಿಸಿ ಘಟಕದ ಜೊತೆ ಕಾರ್ಯದರ್ಶಿ ಕುಮಾರಿ ಧನ್ಯಶ್ರೀ ವಂದಿಸಿದರು.

