
ಅಳದಂಗಡಿ : ಆಮಂತ್ರಣ ಟೀಮ್ ಗಾನ ಯಾನ ತಂಡದಿಂದ ದೀಪಾವಳಿ ಸಂಭ್ರಮ ನ. 11 ರಂದು ಅಳದಂಗಡಿ ಆಮಂತ್ರಣ ಕಚೇರಿಯಲ್ಲಿ ನಡೆಯಿತು. ಗಾಯಕರಾದ ಜಯೇಂದ್ರ ಆಚಾರ್ಯ ಸಾನಾಡಿ ಮತ್ತು ಸುಶ್ಮಿತಾ ಇವರು ದೀಪ ಪ್ರಜ್ವಲನೆ ಮಾಡಿ ಹಾಡಿನ ಸಂಭ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಶಶಿಧರ್ ಶೆಟ್ಟಿ ಅಳದಂಗಡಿ, ಅಳದಂಗಡಿ ಶ್ರೀ ಸೋಮನಾಥೆಶ್ವರಿ ಕುಣಿತ ಭಜನಾ ಮಂಡಳಿ ಸಂಚಾಲಕರು ರಘು ದೇವಾಡಿಗ, ಅಳದಂಗಡಿ ಸುಲ್ಕೇರಿ ಮೊಗ್ರು ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ರಾಜೇಶ್ ಕುಲಾಲ್ ಬೈರೋಟ್ಟು, ಗಾಯಕ ರಾಜೇಂದ್ರ ದೇವಾಡಿಗ,ಡಿ. ಸಿ. ಸಿ ಬ್ಯಾಂಕ್ ಉದ್ಯೋಗಿ ಮಾಲ ಬಂಗೇರ, ಮಹಿಳಾ ಪ್ರತಿನಿಧಿಗಳಾದ ವಿನಯ, ಸವಿತಾ ಆಚಾರ್ಯ ಭಾಗವಹಿಸಿದ್ದರು.
ಆಮಂತ್ರಣ ಸೇವಾ ಪ್ರತಿಷ್ಠಾನದ ವಿಜಯ ಕುಮಾರ್ ಜೈನ್ ಅಳದಂಗಡಿ ಸ್ವಾಗತಿಸಿ, ಮಂಗಳೂರು ಗೋಲ್ಡ್ ಸ್ಮಿತ್ ಬ್ಯಾಂಕ್ ನಿರ್ದೇಶಕರು ಮಂಜುನಾಥ್ ಆಚಾರ್ಯ ಧನ್ಯವಾದ ಸಲ್ಲಿಸಿದರು.
