ಅಂಗನವಾಡಿ ಕೇಂದ್ರಕ್ಕೆ ಕುರ್ಚಿಗಳ ಕೊಡುಗೆ

0
8

JCI ಪರ್ಕಳದ ವತಿಯಿಂದ ಪರ್ಕಳ B.M. ಶಾಲೆಯ ಅಂಗನವಾಡಿ ಕೇಂದ್ರಕ್ಕೆ ಮಕ್ಕಳಿಗೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ JCI ಪರ್ಕಳದ ಅಧ್ಯಕ್ಷರು ಹಾಗೂ ವಲಯ 15ರ ವಲಯ ಉಪಾಧ್ಯಕ್ಷರಾದ Jc. ಕಾಶಿನಾಥ್ ಗೊಗಟೆ, JCI ಪರ್ಕಳದ ಪೂರ್ವಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಮಕ್ಕಳಿಗೆ ಉತ್ತಮ ಹಾಗೂ ಅನುಕೂಲಕರ ಕಲಿಕಾ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಈ ಸೇವಾ ಕಾರ್ಯವನ್ನು ಕೈಗೊಳ್ಳಲಾಯಿತು.