ಉದ್ಯಾವರ SDM ಆಯುರ್ವೇದ ಆಸ್ಪತ್ರೆ ಗೆ ವೀಲ್ ಚೇರ್ ಮತ್ತು ವಾಕರ್ ಗಳ ಕೊಡುಗೆ

0
76

ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಇದರ ಸ್ಥಾಪಕರಾದ ಉಡುಪಿ ವಿಶ್ವನಾಥ್ ಶೆಣೈ ಇವರ ಪ್ರಾಯೋಜಕತ್ವದಲ್ಲಿ ಎಸ್ ಡಿ ಎಮ್ ಆಯುರ್ವೇದ ಆಸ್ಪತ್ರೆ ಉದ್ಯಾವರ ಇಲ್ಲಿಗೆ ರೋಗಿಗಳ ಅನುಕೂಲಕ್ಕಾಗಿ ಎರಡು ವೀಲ್ ಚೇರ್ ಮತ್ತು ವಾಕರ್ ಗಳನ್ನು ನೀಡಲಾಯಿತು.
ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ.ದೀಪಕ್ ಎಸ್.ಎಂ ರವರು ಈ ಕೊಡುಗೆಗಳನ್ನು ಸ್ವೀಕರಿಸಿ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಕೆ ನಿಶಾಂತ್ ಪೈ, ಡಾ.ಸದಾನಂದ ಭಟ್, ರಮಾನಂದ ಕಾರಂತ್, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ, ಅಂತರಾಷ್ಟ್ರೀಯ ಖ್ಯಾತಿಯ ಪತ್ರಿಕಾ ಛಾಯಾಗ್ರಹ ಅಸ್ಟ್ರೋ ಮೋಹನ್, ಕಸಾಪ ಪದಾಧಿಕಾರಿಗಳಾದ ರಂಜನಿ ವಸಂತ್, ಸಿದ್ದ ಬಸಯ್ಯ ಸ್ವಾಮಿ ಚಿಕ್ಕ ಮಠ, ವಸಂತ್, ರಾಘವೇಂದ್ರ ಪ್ರಭು ಕವಾ೯ಲು, ಉದ್ಯಮಿ ಪ್ರಶಾಂತ್ ಕಾಮತ್ ಮುಂತಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here