ಜಾನಪದ ಕಲಾ ಕ್ಷೇತ್ರದ ಸಾಧನೆಗೆ ಡಾ. ಸಿ.ಆರ್. ಪರಶುರಾಮ ಚೌಟ ಅವರಿಗೆ ‘ರಾಜ್ಯಮಟ್ಟದ ಜಾನಪದ ಕಲಾ ರತ್ನ’ ಪ್ರಶಸ್ತಿ

0
49

ಬೆಂಗಳೂರು : ಸ್ಫೂರ್ತಿ ಕಲಾ ಟ್ರಸ್ಟ್ (ನೋಂ.) ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ ನಾಟಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆ.20ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು.

ಸಮಾರಂಭದಲ್ಲಿ ಜಾನಪದ ಕಲಾ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಡಾ. ಸಿ.ಆರ್. ಪರಶುರಾಮ ಚೌಟ ಅವರಿಗೆ ‘ರಾಜ್ಯಮಟ್ಟದ ಜಾನಪದ ಕಲಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಾನಪದ ಕಲಾವಿದ ಹಾಗೂ ಕಮಾಲ ಕೇವಕರಾಗಿ, ಪರಮರಾಮ ಚೌಟ ಜೋಶದ್ವಾರ ಸೇವಾ ಸಮಿತಿ (ನೋಂ.) ಅಧ್ಯಕ್ಷರಾಗಿ ಅವರು ಕಲಾ ಸಂಘಟನೆ ಹಾಗೂ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರೈತ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿಯೂ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಅವರು ಹಲವು ತಾಲ್ಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಅವರು ಕರ್ನಾಟಕ ರಾಜ್ಯ ಜಾನಪದ ಕಲಾವಿದರ ಸಹಕಾರ ಸಂಘ, ಶಿವಮೊಗ್ಗದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಸ್ಫೂರ್ತಿ ಕಲಾ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನೃತ್ಯ, ಸಂಗೀತ ಹಾಗೂ ಅಭಿನಯ ಕ್ಷೇತ್ರದ ಕಲಾವಿದರು ಮತ್ತು ಗಣ್ಯರು ಭಾಗವಹಿಸಿದ್ದರು. ನಾಟಕೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿ ಡಾ. ಪರಶುರಾಮ ಚೌಟ ಅವರನ್ನು ಅಭಿನಂದಿಸಲಾಯಿತು.