ಡಾ. ಗಿರಿಧರ್ ಸಾಲಿಯಾನ್ ಅವರಿಗೆ ಜಾವೆಲಿನ್ ನಲ್ಲಿ ಚಿನ್ನದ ಪದಕ

0
274

ಮಂಗಳೂರಿನ ಡಾ. ಗಿರಿಧರ್ ಸಾಲಿಯನ್ ಇವರು ಮೇ 18 ರಂದು ತೈವಾನ್ ನ ತೈಪೆ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಕ್ರೀಡಾಕೂಟ 2025 ರ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ.
2025ರ ಮೇ 17 ರಂದು ತೈಪೆ ಡೋಮ್‌ನಲ್ಲಿ ಭವ್ಯ ಸ್ವಾಗತ ಸಮಾರಂಭದೊಂದಿಗೆ ವರ್ಲ್ಡ್ ಮಾಸ್ಟರ್ಸ್ ಗೇಮ್ಸ್ ಅಧಿಕೃತವಾಗಿ ಪ್ರಾರಂಭಗೊಂಡಿದ್ದು, ಮೇ 30 ರವರೆಗೆ ನಡೆಯಲಿದೆ.ಹಾಗೂ 107 ದೇಶಗಳಿಂದ 25000 ಕ್ಕೂ ಹೆಚ್ಚು ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಈ ಕ್ರೀಡಾಕೂಟವು ನಡೆಯುತ್ತಿದ್ದು, ಹಿಂದಿನ ಆವೃತ್ತಿಯನ್ನು 2021ರಲ್ಲಿ ಜಪಾನ್ ನ ಕನ್ಸೈನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ರದ್ದುಗೊಳಿಸಲಾಯಿತು. ಪರಿಣಾಮವಾಗಿ ಪ್ರಸ್ತುತ ಆವೃತ್ತಿಯು ಎಂಟು ವರ್ಷಗಳ ವಿರಾಮದ ನಂತರ ತೈವಾನಿನಲ್ಲಿರುವ ತೈಪೆ ನಗರದ ನ್ಯೂತೈಪೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
ಡಾ. ಗಿರಿಧರ್ ಸಾಲಿಯಾನ್ ಇವರಿಗೆ ಇಂತಹ ಸಾಧನೆಗಳೇನು ಹೊಸದಲ್ಲ. ಬೋಧನೆ, ತರಬೇತಿ, ಆಡಳಿತ ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆಗಳಿಗಾಗಿ ಕೇಂದ್ರ ಸರ್ಕಾರದ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯದಿಂದ ಅನುಮೋದಿತ ಭಾರತ ಗೌರವ ರತ್ನ ಸಮ್ಮಾನ್ ಪ್ರಶಸ್ತಿಯನ್ನು ಪಡೆದಿರುವುದು ಮಾತ್ರವಲ್ಲದೆ 2023ರ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ಸ್ ನಲ್ಲಿ ಬಂಗಾರದ ಪದಕ, 2023ರ ವರ್ಲ್ಡ್ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ಸ್ ನಲ್ಲಿ ಬೆಳ್ಳಿ ಪದಕ,ಇದೇ ರೀತಿ ಹಲವಾರು ಪದಕವನ್ನು ಪಡೆದಿದ್ದು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುತ್ತಾರೆ.

ಗಮನಾರ್ಹವಾಗಿ, ಡಾ. ಗಿರಿಧರ್ ಸಾಲಿಯನ್ ಅವರು ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ತರಬೇತುದಾರ ಕಾಶಿನಾಥ್ ಅವರ ಮಾರ್ಗದರ್ಶನ ಮತ್ತು ಸಲಹೆಗಳನ್ನು ಅವಲಂಬಿಸಿ ಮೈದಾನದ ತರಬೇತುದಾರರಿಲ್ಲದೆ ತರಬೇತಿ ಪಡೆಯುತ್ತಾರೆ.
ಇವರು ಪ್ರಸ್ತುತ ಕೆಜಿಟಿಟಿಐ ಮಂಗಳೂರು ಮತ್ತು ಕಾರ್ಕಳ ಸಂಸ್ಥೆಗಳ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here