ಪರಿಸರ ಮತ್ತು ಸಾಂಸ್ಕೃತಿಕ ಸಾಧನೆಗೆ ಅಂತಾರಾಷ್ಟ್ರೀಯ ಮನ್ನಣೆ
ಪುನೀತ್, ಸಂಪಾದಕರು ತುಳುನಾಡು ವಾರ್ತೆ
ಮಂಗಳೂರು : ಪ್ರಸಿದ್ಧ ಪರಿಸರ ಸಂರಕ್ಷಕ, ಹಿರಿಯ ಪತ್ರಕರ್ತ ಮತ್ತು ಸಾಂಸ್ಕೃತಿಕ ಸಂಘಟಕ ಡಾ. ಮಂದಾರ ರಾಜೇಶ್ ಭಟ್ ಅವರಿಗೆ ಅಮೆರಿಕನ್ ವಿಸ್ಡಂ ಪೀಸ್ ಯೂನಿವರ್ಸಿಟಿ ವತಿಯಿಂದ 2025-26ನೇ ಸಾಲಿನ ‘ಕರ್ನಾಟಕ ಸ್ಟೇಟ್ ಇಕೋ-ಎಕ್ಸಲೆನ್ಸ್’ ಪ್ರಶಸ್ತಿ ಲಭಿಸಿದೆ. ಪರಿಸರ ಸಂರಕ್ಷಣೆ ಮತ್ತು ಕೃಷಿ ಕ್ಷೇತ್ರದಲ್ಲಿ ಅವರು ನೀಡಿದ ಅನನ್ಯ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
ಪರಂಪರೆಯ ಹಿನ್ನೆಲೆ –
ತುಳು ವಾಲ್ಮೀಕಿ ಎಂದೇ ಖ್ಯಾತರಾದ ‘ಮಂದಾರ ರಾಮಾಯಣ’ ಮಹಾಕಾವ್ಯದ ಕರ್ತೃ ಮಂದಾರ ಕೇಶವ ಭಟ್ಟರ ಕುಟುಂಬದ ಕುಡಿ ಮಂದಾರ ರಾಜೇಶ್ ಭಟ್, ಮಂದಾರ ಮಾಧವ ಭಟ್ ಮತ್ತು ರಾಧಾ ಭಟ್ಟರ ಪುತ್ರರಾಗಿ ಮಂಗಳೂರಿನ ಕುಡುಪುವಿನಲ್ಲಿ ಜನಿಸಿದವರು.
ಕೃಷಿ, ತೋಟಗಾರಿಕೆ ಮತ್ತು ಉದ್ಯಾನವನ ನಿರ್ಮಾಣದ ತರಬೇತಿ ಪಡೆದಿರುವ ಇವರು, ಪರಿಸರ ಸಂರಕ್ಷಣೆಯನ್ನು ಬದುಕಿನ ಭಾಗವಾಗಿಸಿಕೊಂಡಿದ್ದಾರೆ.
ಸಂದಿರುವ ಪ್ರಮುಖ ಪ್ರಶಸ್ತಿ ಮತ್ತು ಪುರಸ್ಕಾರಗಳು –
ಡಾ. ಭಟ್ಟರ ಸೇವೆಯನ್ನು ಗುರುತಿಸಿದ ಅಂತರರಾಷ್ಟ್ರೀಯ ಮಟ್ಟದ ಅಮೆರಿಕನ್ ಪೀಸ್ ಯೂನಿವರ್ಸಿಟಿಯಿಂದ ‘ಕರ್ನಾಟಕ ಸ್ಟೇಟ್ ಇಕೋ-ಎಕ್ಸಲೆನ್ಸ್ ಅವಾರ್ಡ್-2025’. ನೀಡಿದೆ.
ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿಯಿಂದ “ನ್ಯಾಷನಲ್ ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ್ ರೀಜನಲ್ ಮೀಡಿಯಾ” ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿದೆ ಹಾಗೂ ಅಲಯನ್ಸ್ ಯೂನಿವರ್ಸಿಟಿಯ ರಾಷ್ಟ್ರಮಟ್ಟದ ಪುರಸ್ಕಾರ ನೀಡಿ ಗೌರವಿಸಿದೆ. ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ ಮತ್ತು ಪುತ್ತಿಗೆ ಮಠದ ವತಿಯಿಂದ ‘ರಾಜ್ಯಮಟ್ಟದ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿ-2025’. ಒಲಿದು ಬಂದಿದೆ.

ಧಾರ್ಮಿಕ ಮನ್ನಣೆ– ಉಡುಪಿಯ ಪುತ್ತಿಗೆ ಮಠದಿಂದ ವಿದ್ಯಾ ವಾಚಸ್ಪತಿ ‘ಬನ್ನಂಜೆ ಗೋವಿಂದಾಚಾರ್ಯ ಪ್ರಶಸ್ತಿ’, ಯುನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್ ಹಾಗೂ ಇಂಡಿಯನ್ ಅಂಪಾಯರ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪ್ರದಾನ.
ಇತರ ಗೌರವಗಳು – 2022 ರಲ್ಲಿ ‘ಸುವರ್ಣ ಕರ್ನಾಟಕ ಪ್ರಶಸ್ತಿ’, ‘ಮಂದಾರ ಸಮ್ಮಾನ್-2020’, ‘ಪು ವೆಂ ಪು – ನೆನಪು ಸಮ್ಮಾನ್’ ಹಾಗೂ ಕರಾಡ ಬ್ರಾಹ್ಮಣ ಸುಧಾರಕ ಸಂಘದಿಂದ ಸಾಧಕ ಗೌರವ.
ಸಮಾಜಮುಖಿ ಮತ್ತು ಸಾಂಸ್ಕೃತಿಕ ಸೇವೆ, ಶಿಕ್ಷಣ ಮತ್ತು ಆರೋಗ್ಯ–
ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ ಹಾಗೂ ‘ವಾಯ್ಸ್ ಆಫ್ ಆರಾಧನಾ’ ಮೂಲಕ ರೋಗಿಗಳ ಚಿಕಿತ್ಸೆಗೆ ಆರ್ಥಿಕ ನೆರವು ನೀಡುತ್ತಿದ್ದಾರೆ.
ಸಂಘಟನೆ : ಮಂದಾರ ಪ್ರತಿಷ್ಠಾನದ ಅಧ್ಯಕ್ಷರಾಗಿ ‘ಮಂದಾರ ರಾಮಾಯಣ’ದ ಸುಗಿಪು-ದುನೀಪು ಕಾರ್ಯಕ್ರಮಗಳ ಸಂಯೋಜನೆ, ದ.ಕ. ಜಿಲ್ಲಾ ಜಾನಪದ ಪರಿಷತ್ತಿನ ಉಪಾಧ್ಯಕ್ಷರಾಗಿ ಜನಪದ ಕಲೆಯ ಪ್ರಸಾರಕ್ಕೆ ಶ್ರಮಿಸುತ್ತಿದ್ದಾರೆ.
ಭಾಷಾ ಸೇವೆ : ತುಳು ವರ್ಲ್ಡ್ ಮತ್ತು ತುಳುವ ಮಹಾಸಭೆಯ ಸಂಚಾಲಕರಾಗಿ ತುಳು ಭಾಷೆ-ಸಂಸ್ಕೃತಿಯ ಜಾಗೃತಿ ಮೂಡಿಸುತ್ತಿದ್ದಾರೆ. ‘ಬೀರದ ಬೊಲ್ಪು’ ಕಾರ್ಯಕ್ರಮದ ಮೂಲಕ ತುಳು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸೇತುವೆಯಾಗಿದ್ದಾರೆ.
ಪ್ರಸ್ತುತ ಮೂಡಬಿದಿರೆ ಸಮೀಪದ ಮಂದಾರ ತೋಟದ ಮನೆಯಲ್ಲಿ ಪತ್ನಿ ಅಶ್ವಿನಿ ಅವರೊಂದಿಗೆ ಕೃಷಿ ಬದುಕು ನಡೆಸುತ್ತಾ, ಜಿಲ್ಲಾ ಪತ್ರಿಕಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವ ಇವರ ಸಾಧನೆ ನಾಡಿಗೆ ಹೆಮ್ಮೆ ತಂದಿದೆ.
ಮಂದಾರ ರಾಜೇಶ್ ಭಟ್ಟರು ತುಳುನಾಡು ವಾರ್ತೆ ಬಳಗದ ಮುಖ್ಯ ವರದಿಗಾರರಾಗಿದ್ದು, ಸ್ಪಷ್ಟ, ನಿಷ್ಪಕ್ಷ ಮತ್ತು ಸಮಾಜಮುಖಿ ವರದಿಯನ್ನು ನೀಡುವ ಭಟ್ಟರ ಈ ಸಾಧನೆಗೆ ತುಳುನಾಡು ವಾರ್ತೆ ಬಳಗ ಹೆಮ್ಮೆಪಡುತ್ತದೆ, ಅಭಿಮಾನದಿಂದ ಅಭಿನಂದಿಸುತ್ತಿದೆ.

