ದಾವಣಗೆರೆ : ಗಣರಾಜ್ಯೋತ್ಸವ ಎಂದರೆ ಕೇವಲ ಗಣರಾಜ್ಯೋತ್ಸವ ಆಚರಿಸುವ ಅಥವಾ ರಜೆ ದಿನವಲ್ಲ ಇದು ನಮ್ಮ ನಿಮ್ಮೆಲ್ಲರ ನಮ್ಮ ದೇಶದ ಜವಾಬ್ದಾರಿಯ ದಿನ. ನಮ್ಮ ಸಂವಿಧಾನ ನೀಡಲಾದ ಮೂಲಭೂತ ಹಕ್ಕುಗಳನ್ನು ಗೌರವಿಸುವುದರ ಜೊತೆಗೆ ನಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು.ಪರಿಸರವನ್ನು ರಕ್ಷಿಸುವುದು, ಶೈಕ್ಷಣಿಕ ಕಾಳಜಿ ಪಡೆಯುವುದು, ಭ್ರಷ್ಟಾಚಾರವನ್ನು ವಿರೋಧಿಸುವುದು ,ಎಲ್ಲರನ್ನು ಸಮಾನ ಮನಸ್ಕರದೊಂದಿಗೆ ನಿಭಾಯಿಸುವುದು ಇವೆಲ್ಲವೂ ಈಗಿನ ಹೊಸ ಪೀಳಿಗೆಗೆ ಅರಿವು ಮೂಡಿಸಬೇಕಾಗಿದೆ ಗಣರಾಜ್ಯೊತ್ಸವ ನಮ್ಮ ದೇಶದ ಏಕತೆಯ ಸಂಕೇತವಾಗಿದೆ ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ 77ನೇ ವರ್ಷದ ಗಣರಾಜ್ಯೋತ್ಸವ ಧ್ವಜಾರೋಹಣ ಮಾಡಿದ ದಾವಣಗೆರೆಯ `ಕಲಾಸಿರಿ” ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ವಾಸುದೇವ ಎಲ್.ರಾಯ್ಕರ್ ತಮ್ಮ ಮನದಾಳದ ಅನಿಸಿಕೆ ಹಂಚಿಕೊಂಡರು.
ನಗರದ ಕಸ್ತೂರ್ಬಾ ಬಡಾವಣೆಯ ಕುವೆಂಪು ರಸ್ತೆಯಲ್ಲಿರುವ ಕಲಾಕುಂಚ ಕಛೇರಿಯ ಹೊರಾಂಗಣದಲ್ಲಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಕಲಾಕುಂಚ ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ಮಾತನಾಡಿ, 1950 ರಂದು ನಮ್ಮ ಸಂವಿಧಾನ ಜಾರಿಗೆ ಬಂದ ಐತಿಹಾಸಿಕ ದಿನವನ್ನು ನೆನಪಿಸಿಕೊಳ್ಳುವ ನಮ್ಮೆಲ್ಲರ ದಿನವಾಗಿದೆ. ಡಾ. ಬಿ.ಆರ್.ಅಂಬೇಡ್ಕರ್‌ರವರ ನೇತೃತ್ವದಲ್ಲಿ ಸಂವಿಧಾನ ರಚಿಸಿದ ಈ ಮಹಾನ್ ದಾಖಲೆಯು ನಮಗೆ ಸಾರ್ವಭೌಮತ್ವ ಸಮಾನತೆ ಎಂದರು.
ಕಲಾಕುಂಚದ ಮಹಿಳಾ ತಂಡದಿಂದ ದೇಶ ಭಕ್ತಿಯ ಸಮೂಹ ಗಾಯನದೊಂದಿಗೆ ಪ್ರಾರ್ಥನೆ ಮಾಡಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾಕುಂಚ ವಿವಿಧ ಬಡಾವಣೆ ಅಧ್ಯಕ್ಷರುಗಳಾದ ಲಲಿತಾ ಕಲ್ಲೇಶ್, ಪ್ರಭಾ ರವೀಂದ್ರ, ವಸಂತಿ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.
ವಾಸುದೇವ ಎಲ್.ರಾಯ್ಕರ್, ರಾಜೇಂದ್ರ ಬಂಗೇರ ಇವರುಗಳ ಸಾಧನೆಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಕೊನೆಗೆ ಕಲಾಕುಂಚ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಂದಿಸಿದರು.

