ವಿಶ್ವ ರಾಮಕ್ಷತ್ರಿಯ ಮಹಾಸಂಘದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯಲ್ಲಿ ನಡೆದ ಸಮಿತಿ ಪುನರ್ ರಚನೆ, ಕುಂದಾಪುರದ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ 14.09.2025 ಭಾನುವಾರ ಶ್ರೀ ಎಚ್. ಆರ್. ಶಶಿಧರ್ ನಾಯ್ಕ್ ಅದ್ಯಕ್ಷತೆಯಲ್ಲಿ ನಡೆಯಿತು. ಎಚ್ ಆರ್. ಶಶಿಧರ್ ನಾಯ್ಕ್ ಅಧ್ಯಕ್ಷರಾಗಿ ಪುನರಾಯ್ಕೆಗೊಂಡರು. ಕಾಸರಗೋಡಿನ ಡಾ. ವಾಮನ್ ರಾವ್ ಬೇಕಲ್ ನೂತನ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಸರ್ವಾ ನುಮತಿಯೊಂದಿಗೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಆಯ್ಕೆ ಮಾಡಿ ಸಮಾಜ ಸೇವೆಗೆ ಅಧಿಕೃತ ಅವಕಾಶ ನೀಡಿದ ವಿಶ್ವ ರಾಮಕ್ಷತ್ರಿಯ ಮಹಾಸಂಘದ ಕಾರ್ಯಕಾರೀ ಸಮಸ್ತ ಸದಸ್ಯರಿಗೆ ವಾಮನ್ ರಾವ್ ಬೇಕಲ್ ಅಭಿನಂದನೆ ಸಲ್ಲಿಸಿದ್ದಾರೆ.

