ಸಾಹಿತ್ಯ, ಸಾಮಾಜಿಕ ಪೋಷಕ ಡಾ. ವೆಂಕಟ್ರಮಣ ಹೊಳ್ಳ -ಸಮ್ಮೇಳನ ಸಮಿತಿ ಅಧ್ಯಕ್ಷರಾಗಿ ಆಯ್ಕೆ

0
8

ಕಾಸರಗೋಡು : ಕಾಸರಗೋಡು ನುಳ್ಳಿಪ್ಪಾಡಿಯ “ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಕ್ಕೆ ಇದೀಗ 25 ವರ್ಷ 22.7.2026.ಕ್ಕೆ ತುಂಬುತ್ತಿದೆ. 25ನೇ ವರ್ಷ ಸಂಭ್ರಮಕ್ಕೆ ರಜತ ಸಂಭ್ರಮ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿದೆ. ರಜತ ಸಂಭ್ರಮ ಭಾಗವಾಗಿ ಕರ್ನಾಟಕ -ಕೇರಳ ರಾಜ್ಯದಲ್ಲಿ ಘೋಸಿಸಿದಂತೆ 40 ಕನ್ನಡ ಕಾರ್ಯಕ್ರಮಗಳು ನಡೆದಿವೆ.

ಇದೀಗ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮ 26.7.2026 ರಂದು ನುಳ್ಳಿಪ್ಪಾಡಿ ಕನ್ನಡ ಭವನದಲ್ಲಿ ವಿಶೇಷ ಹೊಸ ಕಟ್ಟಡ ಸಮರ್ಪಣೆ ಯೊಂದಿಗೆ ನಡೆಯಲಿದೆ. ಈ ಕಾರ್ಯಕ್ರಮ ಯಶಸ್ವಿಗಾಗಿ ಸಮಿತಿಯೊಂದನ್ನು ಕನ್ನಡ ಭವನ ಕೇಂದ್ರ ಸಮಿತಿಯ ನೇತೃತ್ವದಲ್ಲಿ ರೂಪುಗೊಂಡಿದೆ.

ಧಾರ್ಮಿಕ, ಸಾಮಾಜಿಕ, ಸಾಹಿತ್ತಿಕ, ಶೈಕ್ಷಣಿಕ ಪೋಷಕರಾದ ನಗರದ ಡಾ. ವೆಂಕಟ್ರಮಣ ಹೊಳ್ಳ ಅವರನ್ನು ಸಮ್ಮೇಳನ ಸಮಿತಿ ಅಧ್ಯಕ್ಷರನ್ನಾಗಿ ಕೇಂದ್ರ ಸಮಿತಿ ಆಯ್ಕೆ ಮಾಡಿ ಸಮ್ಮೇಳನ ಕಾರ್ಯಭಾರ ಅಧಿಕಾರ ಹಸ್ತಾಂತರ ಮಾಡಿದೆ.

LEAVE A REPLY

Please enter your comment!
Please enter your name here