ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರ ಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗ ಹಾಗೂ ಬ್ರಹ್ಮಾದಿ ಪರಿವಾರ ದೇವರುಗಳ ಪ್ರತಿಷ್ಠ ವರ್ಧಂತಿ ಮಹೋತ್ಸವವು ಕ್ಷೇತ್ರದ ಧರ್ಮದ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಿತು.
ಆ ಪ್ರಯುಕ್ತ ಗಾಯತ್ರಿ ಧ್ಯಾನಪೀಠದ ಕಪಿಲ ಮಹರ್ಷಿಗಳ ಸಾನಿಧ್ಯದಲ್ಲಿ ಗುರು ಪೂಜೆಯನ್ನು ಸಲ್ಲಿಸಲಾಯಿತು. ನಾಗ ಕ್ಷೇತ್ರದಲ್ಲಿ ಪಂಚ ವಿಂಷತಿ ಕಲಶ ಆರಾಧನೆ ಕಲಶ ಅಭಿಷೇಕ ಬ್ರಹ್ಮದೇವರುಗಳಿಗೆ ನವಕ ಕಲಶ ಪ್ರಧಾನ ಹೋಮ ಕಲಶಾಭಿಷೇಕ ಷಟ್ ಶಿರ ಸುಬ್ರಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ ಪವಮಾನ ಸೂಕ್ತಯಾಗ ಸಹಿತ ಕಲಶಾ ಅಭಿಷೇಕ, ಅಷ್ಟ ವಟು ಆರಾಧನೆ ಸುಹಾಸಿನಿ ಆರಾಧನೆ ಬ್ರಾಹ್ಮಣರಾಧನೆ ಪರಿವಾರ ಪೂಜೆ ಪ್ರಸನ್ನ ಪೂಜೆ ಮಹಾ ಅನ್ನಸಂತರ್ಪಣೆ ನೆರವೇರಿತು..
ಸಂಜೆ ಶ್ರೀ ದುರ್ಗಾ ಆದಿಶಕ್ತಿಯ ಸನ್ನಿಧಾನದಲ್ಲಿ ಬ್ರಹ್ಮಕಲಶದ ಮಂಡಲ ರಚನೆ, ಭುವನೇಶ್ವರಿ ಪೂಜೆ ಬ್ರಹ್ಮಕಲಶಾದಿವಾಸ ಆದಿವಾಸ ಹೋಮಗಳು ನೆರವೇರಿದವು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ..
ಮೇ 12 ಬ್ರಹ್ಮಕುಂಭಾಭಿಷೇಕ*
ಶ್ರೀ ಕ್ಷೇತ್ರದ ದುರ್ಗಾ ಆದಿಶಕ್ತಿ ದೇವಿಗೆ 19ನೇ ಪ್ರತಿಷ್ಠ ವರ್ಧಂತಿ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ ಗಂಟೆ 8:40ಕ್ಕೆ ಒದಗುವ ವೃಷಭ ಲಗ್ನ ಸುಮೂರ್ತದಲ್ಲಿ ಪಂಚವಿ 0ಶತಿ ದ್ರವ್ಯ ಮೀಳೀತ ಅಷ್ಟೋತ್ತರ ಶತ ಬ್ರಹ್ಮ ಕುಂಭಾಭಿಷೇಕವು ವೇದಮೂರ್ತಿ ಸರ್ವೇಶ ತಂತ್ರಿಗಳಿಂದ ನೆರವೇರಲಿದೆ. ನಂತರ ತುಲಾಭಾರ ಸೇವೆ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆ ಹಾಗೂ ಮಹಾ ಅನ್ನ ಸಂತರ್ಪಣೆ ಸಂಪನ್ನಗೊಳ್ಳಲಿದೆ.
ಪ್ರತಿಷ್ಠವರ್ಧಂತಿ ಮಹೋತ್ಸವದ ಕೊನೆಯ ಧಾರ್ಮಿಕ ಕಾರ್ಯಕ್ರಮವಾಗಿ ತಾರೀಕು 13ರ ಮಂಗಳವಾರದಂದು ಮಹಾ ಸಂಪ್ರೋಕ್ಷಣೆ ಶ್ರೀ ಮಹಾ ಚಂಡಿಕಾಯಾಗ ಬ್ರಾಹ್ಮಣ ಸುಹಾಸಿನಿ ಆರಾಧನೆ ಕನ್ನಿಕರಾಧನೆ ಬ್ರಾಹ್ಮಣರಾಧನೆ ಮಹಾ ಮಂತ್ರಾಕ್ಷತೆ ಹಾಗೂ ಅನ್ನ ಸಂತರ್ಪಣೆ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.