ಪುತ್ತೂರು: ಸಿಇಟಿ, ಟಿಇಟಿ ಸೇರಿ ಉಪನ್ಯಾಸ ಮಾಡಲು ಇರಬೇಕಾದ ಎಲ್ಲಾ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದು ಪಾಸ್ ಆದ ದಕ್ಷಿಣ ಕನ್ನಡದ ಪುತ್ತೂರಿನ ಪ್ರೇಮಾ ಕುಂದರ್ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿದ್ದರು. ವಿದ್ಯಾರ್ಥಿಗಳಿಗೆ ಪಾಠ ಮಾಡಿ ಬದುಕು ಕಟ್ಟಿಕೊಳ್ಳುವ ಮಹತ್ತರ ಕನಸಿನೊಂದಿಗೆ ಹೆಜ್ಜೆ ಇಟ್ಟಿದ್ದರು. ಆದರೆ ತನ್ನ ವೃತ್ತಿ ತೃಪ್ತಿ ನೀಡಿದ್ದರೂ ಆದಾಯ ತೃಪ್ತಿಯಾಗಿರಲಿಲ್ಲ. ಅವಶ್ಯಕತೆ, ಜವಾಬ್ದಾರಿಗಳ ನಿರ್ವಹಣೆಗೆ ಸಂಬಳ ಸಾಲದಾಯಿತು. ಹೀಗಾಗಿ ಅನಿವಾರ್ಯವಾಗಿ ಉಪನ್ಯಾಸಕ ವೃತ್ತಿಯಿಂದ ಹೊರಬಂದ ಪ್ರೇಮಾ ಕುಂದರ್, ಆಯ್ಕೆ ಮಾಡಿಕೊಂಡಿದ್ದು ಮೀನು ಮಾರಾಟ ಬ್ಯೂಸಿನೆಸ್. ಶಿಸ್ತು, ಶ್ರದ್ಧೆ, ಸತತ ಪ್ರಯತ್ನಗಳ ಮೂಲಕ ಇದೀಗ ಪ್ರೇಮಾ ಕುಂದರ್ ಉದ್ಯಮಿಯಾಗಿ ಬೆಳೆದಿದ್ದಾರೆ. ಉಪನ್ಯಾಸಕ ವೃತ್ತಿಯಲ್ಲಿ ಪಡೆಯುತ್ತಿದ್ದ ಸ್ಯಾಲರಿಗಿಂತ ದುಪ್ಪಟ್ಟು ಆದಾಯವನ್ನು ಪ್ರೇಮಾ ಕುಂದರ್ ಪಡೆಯುತ್ತಿದ್ದಾರೆ. ಪ್ರೇಮಾ ಕುಂದರ್ ಬದುಕಿನ ಪಣಯ ಹಲವರಿಗೆ ಸ್ಪೂರ್ತಿಯಾಗಿದೆ.

