ಎಕ್ಕಾರು:ನೂತನ ಸ್ವಾಗತ ಗೋಪುರದ ಉದ್ಘಾಟನೆ

0
82

ಬಜಪೆ:ಕಾವೂರು ಮುಗ್ರೊಡಿ ಕನ್ ಸ್ಟ್ರಕ್ಷನ್ಸ್ ಸುಧಾಕರ ಶೆಟ್ಟಿ ಹಾಗೂ ಅಮರ್ ಇನ್ಸ್ಪಾ ಪ್ರೊಜೆಕ್ಟ್ ನ ಅನಿಲ್ ಕುಮಾರ್ ಶೆಟ್ಟಿಯವರು ನಿರ್ಮಿಸಿ ಸಮರ್ಪಿಸಿದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ಸ್ವಾಗತ ಗೋಪುರನ್ನು ಎಕ್ಕಾರಿನಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ಸ್ವಾಮೀಜಿಯವರು ಉದ್ಘಾಟಿಸಿದರು.

ಈ ಸಂದರ್ಭ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಎಕ್ಕಾರು ಶ್ರೀ ಗೋಪಾಲಕೃಷ್ಣ ಮಠದ ವೇದಮೂರ್ತಿ ಹರಿದಾಸ ಉಡುಪ,ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನದ ಅಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ(ತಿಮ್ಮ ಕಾವರು),ಕಟೀಲು ದೇವಳದ ಅನುವಂಶಿಕ ಅರ್ಚಕ ಹಾಗೂ ಮೊಕ್ತೇಸರ ವಾಸುದೇವ ಆಸ್ರಣ್ಣ,ದೇವಳದ ಆಡಳಿತ ಸಮಿತಿ ಹಾಗೂ ಅನುವಂಶಿಕ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ, ದೇವಳದ ಅನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ,ವೆಂಕಟರಮಣ ಆಸ್ರಣ್ಣ,ಅನಂತಪದ್ಮನಾಭ ಆಸ್ರಣ್ಣ, ಶಾಸಕ ಉಮಾನಾಥ ಕೋಟ್ಯಾನ್ ,ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ,ಕಾವೂರು ಮುಗ್ರೋಡಿ ಕನ್ ಸ್ಟ್ರಕ್ಷನ್ಸ್ ನ ಸುಧಾಕರ ಶೆಟ್ಟಿ,ಅಮರ್ ಇನ್ಸ್ಪಾಪ್ರೊಜೆಕ್ಟ್ ನ ಅನಿಲ್ ಕುಮಾರ್,ಎಕ್ಕಾರು ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಆಚಾರ್ಯ,ಪ್ರಮುಖರಾದ ಮೋನಪ್ಪ ಶೆಟ್ಟಿ ಎಕ್ಕಾರು,ರತ್ನಾಕರ ಶೆಟ್ಟಿ,ಪ್ರದ್ಯುಮ್ನ ರಾವ್ ಶಿಬರೂರು,ಭುವನಾಭಿರಾಮ ಉಡುಪ,ಸುದರ್ಶನ್ ಮೂಡುಬಿದಿರೆ,ಆದರ್ಶ್ ಶೆಟ್ಟಿ ಎಕ್ಕಾರು,ಪ್ರಕಾಶ್ ಕುಕ್ಯಾನ್ ,ಸುದೀಪ್ ಅಮೀನ್,ಗಿರೀಶ್ ಕಟೀಲ್ , ಹಾಗೂ ಮೊದಲಾದವರು ಉಪಸ್ಥಿತರಿದ್ದರು.ರಾಜೇಂದ್ರ ಪ್ರಸಾದ್ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here