Saturday, April 26, 2025
Homeಕಿನ್ನಿಗೋಳಿಕಿನ್ನಿಗೋಳಿಯಲ್ಲಿ ಜಾನಪದ ಅಂದು ಇಂದು ಮುಂದು ಚಿಂತನೆ ಕಾರ್ಯಕ್ರಮ

ಕಿನ್ನಿಗೋಳಿಯಲ್ಲಿ ಜಾನಪದ ಅಂದು ಇಂದು ಮುಂದು ಚಿಂತನೆ ಕಾರ್ಯಕ್ರಮ


ಕಿನ್ನಿಗೋಳಿ : ಆಧುನಿಕತೆಯ ಕಾಲಘಟ್ಟದಲ್ಲಿ ನಮ್ಮಜನಮಾನಸದಲ್ಲಿ ಹಾಸುಹೊಕ್ಕದಾ ಜಾನಪದ ಆಚರಣೆಗಳು , ಕೆಡ್ಡಸ , ಆಟಿ ಆಚರಣೆಗಳು ಹಾಗೂ ಹಬ್ಬದ ಸಂಪ್ರದಾಯಗಳು ತಿಂಡಿ ತಿನಿಸುಗಳು ಮರೆಯಾಗುತ್ತಿದ್ದು ಅದನ್ನು ಮುಂದಿನ ತಲೆಮಾರಿಗೆ ಉಳಿಸಿ ಬೆಳಸುವ ಒಂದಿಷ್ಟು ಕೆಲಸ ಕಾರ್ಯ ನಡೆಯಬೇಕಾಗಿದೆ ಎಂದು ತುಳುವರ್ಲ್ಡ್ ಡಾ| ರಾಜೇಶ್ ಆಳ್ವ ಬದಿಯಡ್ಕ ಹೇಳಿದರು. ಅವರು ಎ. ೧೩ ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ದ. ಕ. ಜಿಲ್ಲಾ ತಾಲೂಕು ಘಟಕ ಮೂಡಬಿದಿರೆ ಹಾಗೂ ಯುಗಪುರುಷ ಕಿನ್ನಿಗೋಳಿ ಸಹಭಾಗಿತ್ವದಲ್ಲಿ ಜಾನಪದ ಅಂದು ಇಂದು ಮುಂದು ಚಿಂತನೆ ಮತ್ತು ವಾಯ್ಸ್ ಆಫ್ ಆರಾಧನ ಬಳಗದಿಂದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಗೈದು ಮಾತನಾಡಿದರು. ಯುಗಪುರುಷದ ಭುವನಾಭಿರಾಮ ಉಡುಪ Pರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪದ್ಮಶ್ರೀ ಭಟ್ ಅವರ ತಂಡ ಜಾನಪದ ಹಾಗೂ ಮಕ್ಕಳ ಹಬ್ಬ ಕಾರ್ಯುಕ್ರಮ ಹಮ್ಮಿಕೊಂಡು ಉತ್ತಮ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಮೂಡಬಿದಿರೆ ಜಾನಪದ ಅಧ್ಯಕ್ಷೆ ಪದ್ಮಶ್ರೀ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್, ಡಾ| ರಾಜೇಶ್ ಭಟ್ ಮಂದಾರ , ರಾಜೇಶ್ ಸ್ಕೈಲಾರ್ಕ್ ಉಪಾಧ್ಯಕ್ಷ ಚಂದ್ರಹಾಸ ದೇವಾಡಿಗ , ಅಭಿಷೇಕ ಶೆಟ್ಟಿ ಐಕಳ, ಡಾ. ರಾಮಕೃಷ್ಣ ಶಿರೂರು, ಸದಾನಂದ ನಾರಾವಿ, ಬಸವರಾಜ ಮಂತ್ರಿ, ದೀನ್‌ರಾಜ್ ಕೆ ಮತ್ತಿತರರು ಉಪಸಿತ್ಥರಿದ್ದರು. ಸಂಭ್ರಮ ಸ್ವಾಗತಿಸಿದರು. ಚೇತನಾ ರಾಜೇಂದ್ರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಾಯ್ಸ್ ಆಫ್ ಆರಾಧನ ಬಳಗದವರಿಂದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

RELATED ARTICLES
- Advertisment -
Google search engine

Most Popular