ದಾವಣಗೆರೆ : ಎಲೆಮರೆಯ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿದಾಗ “ಕರುನಾಡ ಕನ್ನಡ ಕಣ್ಮಣಿ” ರಾಜ್ಯ ಪ್ರಶಸ್ತಿ ನೀಡಿದಾಗ ಸಾಧಕರಿಗೆ ಚೈತನ್ಯ ಮತ್ತು ಉತ್ಸಾಹ ಹೆಚ್ಚಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಕಿನ್ನಿಗೋಳಿಯ `ಅನಂತ ಪ್ರಕಾಶ’ ಪ್ರಧಾನ ಸಂಪಾದಕರಾದ ಕೊಡೆತ್ತೂರು ಸಚ್ಚಿದಾನಂದ ಉಡುಪರವರು ನವೆಂಬರ್ 15 ರಂದು ಭಾನುವಾರ ದಾವಣಗೆರೆಯ ಗಡಿಯಾರ ಗೋಪುರದ ಹತ್ತಿರವಿರುವ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಈ ವಿಜೃಂಭಣೆಯ ಸಮಾರಂಭದ ಜ್ಯೋತಿ ಬೆಳಗಿ ಉದ್ಘಾಟಿಸಿ ಮಾತನಾಡಿದರು.
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಆಶ್ರಯದಲ್ಲಿ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಮ್ಮ ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳಿಂದ ಇತಿಹಾಸವಿದೆ ಎಂದು ಕನ್ನಡಿಗರು ರಾಷ್ಟçಮಟ್ಟದಲ್ಲಿ ಕೀರ್ತಿಗಳಿಸಿದ್ದಾರೆ. ಭಾರತದ ಕರ್ನಾಟಕ ರಾಜ್ಯದಲ್ಲಿ ಕನ್ನಡ ನಾಡಿನ ಹಿರಿಯ ಸಾಹಿತಿಗಳು 8 ಜ್ಞಾನಪೀಠ ಬಂದಿರುವುದು ಶ್ಲಾಘನೀಯ. ಎಷ್ಟೇ ಭಾಷೆ ಇದ್ದರೂ ಕೂಡ ನಾವು ನೀವೆಲ್ಲರೂ ಕನ್ನಡ ತಾಯಿ ಭುವನೇಶ್ವರಿಗೆ ಗೌರವಿಸಬೇಕು. ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ಗೆ ಸೀಮಿತವಾಗದೆ ನಿತ್ಯೋತ್ಸವ ಆಗಲಿ. ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಕನ್ನಡ ಭಾಷೆಗೆ ಆಧ್ಯತೆ ಕೊಟ್ಟು ಇನ್ನಷ್ಟು ಬೆಳೆಯಲಿ ಎಂದು ಉಡಪರು ತಮ್ಮ ಮನದಾಳದ ಮಾತು ವ್ಯಕ್ತಪಡಿಸಿದರು.
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷರಾದ ವಾಸುದೇವ ಲಕ್ಷö್ಮಣ್ರಾಯ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಸಾಧಕರಿಗೆ ಕನ್ನಡ ತಿಲಕವಿಟ್ಟು, ಕನ್ನಡ ಕಂಕಣ ಕಟ್ಟಿ, ಕನ್ನಡಾರತಿ ಬೆಳಗಿ, ಪುಷ್ಪ ವೃಷ್ಟಿಯೊಂದಿಗೆ ಗೌರವಿಸುತ್ತಾರೆ. ನಂತರ ಅವರದೇ ಭಾವಚಿತ್ರವಿರುವ ಸನ್ಮಾನ ಪತ್ರ ಮುದ್ರಿಸಿ, ಪ್ರೇಂ ಮಾಡಿ, ವೇದಿಕೆಯ ಸಿಂಹಾಸನದ ಮೇಲೆ ಕೂರಿಸಿ, ಕನ್ನಡ ಪೇಟಾದೊಂದಿಗೆ ಹಾರ, ಶಾಲು ಕನ್ನಡ ತಾಯಿ ಭುವನೇಶ್ವರಿಯ ಸ್ಮರಣಿಕೆ ನೀಡಿ ಗೌರವಿಸಿದ್ದು ವಿಶೇಷತೆಕಳೆದ 36 ವರ್ಷಗಳಿಂದ ನಿರಂತರವಗಿ ಕಠಿಣ ಪರಿಶ್ರಮದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರಸ್ವತ ಪುರಸ್ಕಾರ, ಕನ್ನಡ ಕೌಸ್ತುಭ, ಕನ್ನಡ ಕುವರ-ಕುವರಿ ರಾಜ್ಯ ಪ್ರಶಸ್ತಿಗಳನ್ನು ಸುಮಾರು 40 ಸಾವಿರ ಮಕ್ಕಳಿಗೆ ಪುರಸ್ಕಾರ ನೀಡಿದ್ದು ಈ ಸಂಸ್ಥೆಯ ಸಾಧನೆ ಎಂದು ವ್ಯಕ್ತಪಡಿಸಿದರು.
ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ಪತ್ರಕರ್ತರಾದ ಬಿ.ಜೆ. ಅನಂತಪದ್ಮನಾಭರಾವ್, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಗಳ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಗೌರವ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಕ್ತಾ ಶ್ರೀನಿವಾಸಪ್ರಭು ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಅಪರೂಪದ ಸಮಾರಂಭಕ್ಕೆ ಪುಷ್ಪಾ ಮಂಜುನಾಥ್ ಸ್ವಾಗತಿಸಿದರು. ಚಂದ್ರಶೇಖರ ಅಡಿಗ ಅಚ್ಚುಕಟ್ಟಾಗಿ ನಿರೂಪಣೆ ಮಾಡಿ ಕೊನೆಗೆ ಕಲಾಕುಂಚ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಂದಿಸಿದರು.

