ಎ.ಜಿ. ಅಸೋಸಿಯೇಟ್ಸ್ ಉಡುಪಿ ವತಿಯಿಂದ ಎಂಜಿನಿರ್ಸ್ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಎಂಜಿನಿರ್ಸ್ ದಿನಾಚರಣೆ ವಿಶೇಷ ಕಾರ್ಯಕ್ರಮವು ಬ್ರಹ್ಮಗಿರಿ ಸರ್ಕಲ್ ಸಮೀಪದ ನಾಯರ್ಕೆರೆ ಎ.ಜಿ. ಅಸೋಸಿಯೇಟ್ಸ್ನ ಎಜಿಎ ಕ್ಯಾಂಟಿಲೀವರ್ನಲ್ಲಿ ಮಂಗಳವಾರ ನಡೆಯಿತು.
ಕಲ್ಕೂರ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ನಿರ್ದೇಶಕ ರಾಹುಲ್ ಕಲ್ಕೂರ ಹಾಗೂ ಎಸ್ಎಂವಿಟಿಯ ಸಿವಿಲ್ ಎಂಜಿನಿಯರ್ ಮತ್ತು ತರಬೇತಿ ಪ್ಲೇಸ್ಮೆಂಟ್ ಮುಖ್ಯಸ್ಥ ಎಂಜಿನಿಯರ್ ರೋಶನ್ ಎಸ್. ಕೋಟ್ಯಾನ್ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್ಎಂವಿಟಿಯ ಸಿವಿಲ್ ಎಂಜಿನಿಯರ್ ಮತ್ತು ತರಬೇತಿ ಪ್ಲೇಸ್ಮೆಂಟ್ ಮುಖ್ಯಸ್ಥ ಎಂಜಿನಿಯರ್ ರೋಶನ್ ಎಸ್. ಕೋಟ್ಯಾನ್ ಮಾತನಾಡಿ, ಸರ್.ಎಂ. ವಿಶ್ವೇಶ್ವರಯ್ಯ ಅವರ ಸಾಧನೆ, ಜೀವನ ಮËಲ್ಯ ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಮಹತ್ತರವಾದ ಕೊಡುಗೆ ನೀಡಬೇಕು. ಸಮಾಜದ ಎಲ್ಲಾ ಸ್ತರದಲ್ಲೂ ಎಂಜಿನಿರ್ಸ್ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.
ಎಂಜಿನಿರ್ಸ್ ದಿನಾಚರಣೆಯ ಅಂಗವಾಗಿ ಕಾರ್ ಕಲೆಕ್ಟರ್ ಆ್ಯಂಡ್ ಎಡ್ವೆಂಚರ್ ಮೋಟಾರ್ ಸೈಕ್ಲಿಸ್ಟ್, ಎಂಜಿನಿಯರ್ ರೋಶನ್ ಶೆಟ್ಟಿ ಆರ್. ಅವರನ್ನು ಸನ್ಮಾನಿಸಲಾಯಿತು.
ಎಂಜಿನಿಯರಿAಗ್ ಇಂದಿನ ಬದುಕನ್ನು ರೂಪಿಸಿ, ಉತ್ತಮ ನಾಳೆಯನ್ನು ನಿರ್ಮಿಸುತ್ತದೆ ಎಂಬ ಆಶಯದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಎ.ಜಿ. ಅಸೋಸಿಯೇಟ್ಸ್ ಉಡುಪಿ ಸಂಸ್ಥೆಯ ಪಾಲುದಾರರಾದ ಎಂ. ಗೋಪಾಲ ಭಟ್ ಮತ್ತು ಯೋಗೀಶ್ಚಂದ್ರಧರ್ ತಿಳಿಸಿದರು.
ಎ.ಜಿ. ಅಸೋಸಿಯೇಟ್ಸ್ ಉಡುಪಿ ಸಂಸ್ಥೆಯ ಪಾಲುದಾರ ಎಂ. ಗೋಪಾಲ ಭಟ್ ಸ್ವಾಗತಿಸಿದರು. ಎಂಜಿನಿಯರ್ ಸೀಮಾ ಸರ್.ಎಂ.ವಿಶ್ವೇಶ್ವರಯ್ಯ ಅವರು ಹಾಗೂ ಎಂಜಿನಿರ್ಸ್ ದಿನಾಚರಣೆಯ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಜಿನಿಯರ್ ಸಿನೋರಾ ಡಿಸೋಜ ವಂದಿಸಿದರು. ಎಂಜಿನಿಯರ್ ಮಹೇಶ್ ಹಲ್ಸನಾಡು ಕಾರ್ಯಕ್ರಮ ನಿರೂಪಿಸಿದರು.

