ಮಡಿಕೇರಿ: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತದ ಚರ್ಚ್ ಸೈಡ್ ಹೋಟೇಲ್ ಬಳಿ (ಇವಿ ಚಾರ್ಜಿಂಗ್ ಸ್ಟೇಷನ್) ಎಂಬ ನಾಮಫಲಕವು ಆಂಗ್ಲ ಭಾಷೆಯಲ್ಲಿ ಎದ್ದು ಕಾಣುತ್ತಿದ್ದು ಇದನ್ನು ಕಂಡ ಕರ್ನಾಟಕ ರಕ್ಷಣಾ ವೇದಿಕೆ ಹೆಚ್. ಶಿವರಾಮೆಗೌಡ ಬಣದ ಜಿಲ್ಲಾಧ್ಯಕ್ಷರಾದ ಬಿ.ಎ ದಿನೇಶ್ ಶೆಟ್ಟಿ ಹಾಗೂ ಮಡಿಕೇರಿ ತಾಲ್ಲೂಕು ಅಧ್ಯಕ್ಷರಾದ ಅರುಣ್ ಆಂಗ್ಲ ಭಾಷೆಯ ನಾಮಫಲಕಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ ಹಾಗೂ ನಗರಸಭೆಯ ವಿರುದ್ಧ ಕಿಡಿಕಾರಿದ್ದಾರೆ.

ಸರ್ಕಾರವು ಕಡ್ಡಾಯ ಕನ್ನಡ ಶೇಕಡ 60 ಭಾಗದಷ್ಟು ಇರಬೇಕು ಎಂದು ಆದೇಶ ಹೊರಡಿಸಿದೆ. ಆದರೆ ಇಲ್ಲಿ ಆಂಗ್ಲ ಭಾಷೆನೇ ರಾರಾಜಿಸುತ್ತಿದೆ, ನಗರಸಭೆ ಅಧಿಕಾರಿಗಳು ಸರ್ಕಾರದ ಆದೇಶವನ್ನು ಗಾಳಿಗೆ ತೂರಿದ್ದಾರೆ. ಆದಷ್ಟು ಬೇಗ ಆಂಗ್ಲ ಭಾಷೆ ನಾಮ ಫಲಕವನ್ನು ಬಳಸಿದ ಅಂಗಡಿ ಮಾಲೀಕರಿಗೆ ದೊಡ್ಡ ಮೊತ್ತದ ದಂಡವನ್ನು ವಿಧಿಸಿ ಪರವಾನಿಗೆ ರದ್ದುಗೊಳಿಸಬೇಕು.ಹಾಗೂ ಪಾಲಕ ಬದಲಾಯಿಸಬೇಕೆಂದು ಒತ್ತಾಯಿಸಿದ್ದಾರೆ. ಇದನ್ನು ಸರಿಪಡಿಸದೆ ಹೋದರೆ ಕ.ರ.ವೇ.ಪದಾಧಿಕಾರಿಗಳು ನಗರಸಭೆಯ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾಧ್ಯಕ್ಷರು ಬಿ.ಎ ದಿನೇಶ್ ಶೆಟ್ಟಿ,ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಕೆ.ಚಂದ್ರು, ಮಡಿಕೇರಿ ತಾಲ್ಲೂಕು ಅಧ್ಯಕ್ಷರು ಅರುಣ್ ಕುಮಾರ್ ,ತಾಲ್ಲೂಕು ಗೌರವಾಧ್ಯಕ್ಷರು ನಾಗರಾಜ್, ಮಹಿಳಾ ತಾಲ್ಲೂಕು ಉಪಾಧ್ಯಕ್ಷರು ತನುಜಾವತಿ, ಲತಾ ಹಾಗೂ ತಾಜ್ ನಿಶಾ ಮುಂತಾದವರು ಉಪಸ್ಥಿತರಿದ್ದರು .
ವರದಿ: ಪ್ರಿತುನ್ ಪೂವಣ್ಣ

