ಮೂಡಬಿದಿರೆ: ಕಡಂದಲೆ ಸುಬ್ರಮಣ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಜೆ ಸಿ ಐ ಮುಂಡ್ಕೂರು ಭಾರ್ಗವ ಇದರ ವತಿಯಿಂದ ಪರಿಸರ ದಿನವನ್ನು ಆಚರಿಸಲಾಯಿತು.
ಶಾಲಾ ವಿದ್ಯಾರ್ಥಿಗಳಿಂದ ಪರಿಸರ ಸ್ವಚ್ಛತೆ, ಗಿಡ ನೆಡುವ ಕಾರ್ಯಕ್ರಮ, ಗಿಡಗಳ ಪ್ರಧಾನ, ಮತ್ತು ಕಡಂದಲೆ ಮೈನ್ ಶಾಲೆಯ ಶಿಕ್ಷಕ ಶರಣ್ಯ ಹಿರೇಮಠ್ ಇವರಿಂದ ಪರಿಸರ ಜಾಗ್ರತಿ ಉಪನ್ಯಾಸ ನಡೆಯಿತು. ಜೆಸಿಐ ಅಧ್ಯಕ್ಷ ವಸಂತ್ ಅಧ್ಯಕ್ಷ ಸ್ಥಾನದಲ್ಲಿದ್ದು, ಮುಖ್ಯ ಶಿಕ್ಷಕರು ಸ್ವಾಗತಿಸಿದರು, ಶಿಕ್ಷಕ ಸುಧಾಕರ್ ಕಾರ್ಯಕ್ರಮ ನಿರೂಪಣೆ ಮಾಡಿದರು ಉಮೇಶ್ ಕೊಲ್ಲೂರು ಧನ್ಯವಾದ ಮಾಡಿದರು.