ವರದಿ-ರಾಯಿ ರಾಜಕುಮಾರ
ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಸಮೀಪದ ಕೆರೆ ಬಳಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಜನವರಿ 14 ರಂದು ಪರಿಸರ ಮಾಹಿತಿ ನೀಡಲಾಯಿತು. ‘ನಮ್ಮ ಶಾಲೆ ನಮ್ಮ ಪರಿಸರ’ ವಿಚಾರವಾಗಿ ಹಲವಾರು ಮಾಹಿತಿಗಳನ್ನು ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಸಂಪನ್ಮೂಲ ವ್ಯಕ್ತಿ, ಪತ್ರಕರ್ತ ರಾಯಿ ರಾಜ ಕುಮಾರ ಹಂಚಿಕೊಂಡರು. ಹಲವಾರು ಮಾಹಿತಿಗಳಿಗೆ ಸೂಕ್ತ ಉದಾಹರಣೆಗಳನ್ನು ನೀಡಿ ಮಕ್ಕಳಿಗೆ ಮನದಟ್ಟು ಮಾಡಿಸಿದರು. ಶಾಲಾ ಶಿಕ್ಷಕಿಯರುಗಳು, ಎಲ್ಲ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.


