ಬ್ರಹ್ಮಾವರ : ಜಯಂಟ್ಸ್ ಹಾಗೂ ಜನಔಷಧಿ ಕೇಂದ್ರದ ವತಿಯಿಂದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮಹೇಶ್ ಐತಾಳ ಮತ್ತು ಮಕ್ಕಳ ತಜ್ಞ ಡಾ. ಮಹಾಬಲ ಕೆ ಹಾಗೂ ಸಿಬ್ಬಂದಿ ವರ್ಗದವರಾದ ಪೂರ್ಣಿಮ ಮತ್ತು ಜಯಂತಿ ಯವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಅದೇ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ನೂತನ ವೈದ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಅಜಿತ್ ಕುಮಾರ್ ಶೆಟ್ಟಿ ಅವರನ್ನು ಹೂಗುಚ್ಚ ನೀಡಿ ಸ್ವಾಗತಿಸಲಾಯಿತು.
ಕಾರ್ಯಕ್ರಮವನ್ನು ಬ್ರಹ್ಮಾವರ ಜ ಜಯ 0ಟ್ಸ್‌ನ ಸಲಹೆಗಾರರಾದ ಮಧುಸೂದನ್ ಹೇರೂರು ನಿರೂಪಿಸಿ, ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯವರು ತಮ್ಮ ಸೇವಾ ಅವಧಿಯಲ್ಲಿ ಸಲ್ಲಿಸಿದ ಸೇವಾ ಕಾರ್ಯಗಳನ್ನು ಪ್ರಶಂಸಿ ಅವರು ನೀಡಿದ ಜೀವನ ಮೌಲ್ಯವನ್ನು ಕೊಂಡಾಡಿ ಬ್ರಹ್ಮಾವರದ ಜನತೆ ಅವರನ್ನು ನೆನಪಿಸಿ ಕೊಳ್ಳುತ್ತದೆ ಎಂದುಶುಭ ಹಾರೈಸಿದರು ಗೌರವ ಸ್ವೀಕರಿಸಿದ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ತಮ್ಮ ಸೇವಾ ಪಯಣದ ಅನುಭವ ಅನಿಸಿಕೆಗಳನ್ನು ಸಭೆಯಲ್ಲಿ ಹಂಚಿಕೊಂಡರು.
ಯೂನಿಟ್ ಡೈರೆಕ್ಟರ್ ಸುಂದರ್ ಪೂಜಾರಿ ಸ್ವಾಗತಿಸಿದರು. ಕಾರ್ಯಕಾರಿ ನಿರ್ವಾಹಕ ಮಿಲ್ಟನ್ ಒಲಿವೆರಾ ವಂದನಾರ್ಪಣೆ ಮಾಡಿದರು. ವೇದಿಕೆಯಲ್ಲಿ ಸ್ತ್ರೀರೋಗ ತಜ್ಞೆ ಡಾ. ದೀಕ್ಷಿತಾ ; ಆರ್ಯುವೇದ ತಜ್ಞೆ ಡಾ. ವನಜಾಕ್ಷಿ, ದಂತ ವಿಭಾಗ ದ ಡಾ. ಪ್ರದೀಪ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ಜಯಂಟ್ಸ್ ಕಾರ್ಯಕಾರಿ ಸದಸ್ಯರಾದ ಶೀನಾಥ್ ಕೋಟ, ರೋನಾಲ್ಡ್ ಡಯಾಸ್, ವಿಲ್ಸನ್ ಡಿ ಸಿಲ್ವಾ, ಡೋರಿಸ್ ಡಿ ಸೋಜಾ, ಪ್ರತಿಭಾ ಸುರೇಶ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

