ಯೋಗೀಶ್ ಉಳ್ಳಾಲರಿಗೆ ಬೀಳ್ಕೊಡುಗೆ ಸಮಾರಂಭ

0
8

ಬ್ರಹ್ಮಾವರ : ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸಮನ್ವಯ ಅಧಿಕಾರಿಗಳ ಕಚೇರಿ ಮತ್ತು ಎಲ್ಲಾ ಶಿಕ್ಷಕರ ಸಹಕಾರ, ಕರ್ನಾಟಕ ರಾಜ್ಯ ಜಿಲ್ಲಾ ಶಿಕ್ಷಕರ ಸಂಘ .ಕರ್ನಾಟಕ ರಾಜ್ಯ ತಾಲೂಕು ಶಿಕ್ಷಕರ ಸಂಘದ ವತಿಯಿಂದ 29 ವರ್ಷಗಳ ಕಾಲ ಇಲಾಖಾಧಿಕಾರಿಗಳ ವಾಹನ ಚಾಲಕರಾಗಿದ್ದ ಯೋಗೀಶ್ ಉಳ್ಳಾಲ ಇವರ ವಯೋನಿವೃತ್ತಿ ಅಂಗವಾಗಿ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ಮಂಗಳವಾರ ಉನ್ನತಿ ಸಭಾಭವನದಲ್ಲಿ ಜರುಗಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಪಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ನಿವೃತ್ತರಾದ ಮತ್ತು ಬೇರೆ ಕಡೆ ವರ್ಗಾವಣೆಗೊಂಡ 9 ಮಂದಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿಠಲ್‌ದಾಸ್ ಬನ್ನಂಜೆ,ವಸಂತ ಶೆಟ್ಟಿ,ನಾಗೇಶ್‌ಶ್ಯಾನುಭಾಗ್, ಓ .ಆರ್ ಪ್ರಕಾಶ್, ಶಭನಾ ಅಂಜು,ಲೋಕೇಶ್, ಆನಂದ್, ಬಿ.ಟಿ ನಾಯ್ಕ್, ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಇಂದಿನ ವಿದ್ಯಾಂಗ ಉಪ ನಿರ್ದೇಶಕ ಲೋಕೇಶ್ ಇವರ ಉಪಸ್ಥಿತಿಯಲ್ಲಿ ಜರುಗಿತು.

ಡಯಟ್ ಅಭಿವೃದ್ಧಿಯ ಅಶೋಕ್ ಕಾಮತ್ ಮಾತನಾಡಿ ಚಾಲಕ ಯೋಗೀಶ್ ಉಳ್ಳಾಲರ ಕರ್ತವ್ಯ ನಿಷ್ಠೆ, ಸಮಯಪಾಲನೆ ಮತ್ತು ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರೊಂದಿಗೆ ಇರುವ ಉತ್ತಮ ಭಾಂಧವ್ಯ ಇರುವ ಕಾರಣ 9 ಮಂದಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇಂತಹ ಸಮಾರಂಭದಲ್ಲಿ ಭಾಗವಹಿಸಲು ಕಾರಣವಾಗಿದೆ ಎಂದರು.

ಇಲಾಖೆಯ ಅನುಪಾಲನಾಧಿಕಾರಿಗಳು, ಸಿಬ್ಬಂದಿಯವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಸ್ವಾಗತಿಸಿ, ಬಿ. ಆರ್ ಪಿ ಪದ್ಮ ವಂದಿಸಿ, ಓಂ ಶ್ರೀ ಕಾರ್ಯಕ್ರಮ ನಿರೂಪಿಸಿದ್ದರು.

LEAVE A REPLY

Please enter your comment!
Please enter your name here