ದಿನಾಂಕ : 04-02-2026ನೇ ಬುಧವಾರ , ಪಡುಜೆಡ್ಡು ಕುಟುಂಬಸ್ಥರ ಪೂರ್ವಿಕರು ಆರಾಧಿಸಿಕೊಂಡು ಬಂದಿರುವ ನಾಗ ಸಾನಿಧ್ಯದ ಜೀರ್ಣೋದ್ಧಾರದ ಪುನಃಪ್ರತಿಷ್ಠೆ ನಡೆಯಲಿರುವುದು.
ದಿನಾಂಕ : 05-02-2026ನೇ ಗುರುವಾರ , ಪುಣ್ಯಾಹ ನಾಂಧಿ, ನಾಗಬಿಂಬ ಪ್ರತಿಷ್ಠೆ, ಜೀವಕುಂಭ ಸ್ನಪನ ಪಂಚವಿಂಶತಿ ಕಲಶ ಸ್ಥಾಪನೆ, ಸ್ನಪನಾಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ಸಂದರ್ಶನ, ತೀರ್ಥಪ್ರಸಾದ ವಿತರಣೆ ಜರುಗಲಿದೆ.
ಮಧ್ಯಾಹ್ನ 12.30 ರಿಂದ ಮಹಾ ಅನ್ನಸಂತರ್ಪಣೆ , ಸಂಜೆ 7.00ರಿಂದ ನಾಗಸನ್ನಿಧಿಯಲ್ಲಿ ಹಾಲಿಟ್ಟು ಸೇವೆ, ಬ್ರಹ್ಮಮಂಡಲ ಸೇವೆ ರಾತ್ರಿ ಸಪರಿವಾರ ಪಾಷಾಣಕುಟ್ಟಿ ಸಾನಿಧ್ಯದಲ್ಲಿ ಸಿರಿಸಿಂಗಾರ ಸೇವೆ ನಡೆಯಲಿದೆ.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ವೈ. ರಾಘವೇಂದ್ರ ಮಧ್ಯಸ್ಥರ ನೇತೃತ್ವದಲ್ಲಿ ಜರಗಲಿರುವುದು.

