ಶ್ರೀ ವರಸಿದ್ಧಿ ವಿನಾಯಕ ಮಹೋತ್ಸವ ಸಮಿತಿಯಿಂದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ವಾಸುದೇವ ಎಲ್. ರಾಯ್ಕರ್‌ರವರಿಗೆ ಸನ್ಮಾನ

0
12

ದಾವಣಗೆರೆ : ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ (ರಾಮ ಎಂಡ್ ಕೋ ಸರ್ಕಲ್)ಶ್ರೀ ವರಸಿದ್ಧಿ ವಿನಾಯಕ ಮಹೋತ್ಸವ ಸಮಿತಿಯಿಂದ ಇತ್ತೀಚಿಗೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಮತ್ತು ಕಲಾಕುಂಚದ ಅಧ್ಯಕ್ಷರಾದ ವಾಸುದೇವ ಎಲ್. ರಾಯ್ಕರ್‌ರವರಿಗೆ ಅಭಿಮಾನದಿಂದ ಅಭಿನಂದಿಸಿ, ಗೌರವಿಸಿ ಸನ್ಮಾನ ಮಾಡಿದರು.

ವಾಣಿಜ್ಯ ನಗರಿ ದಾವಣಗೆರೆಯನ್ನು ಸಾಂಸ್ಕೃತಿಕ ನಗರಿಯಾಗಿ ಕಳೆದ 4 ದಶಕಗಳಿಂದ ಬದಲಾಯಿಸಿದ್ದು ಕರಾವಳಿ ಜಿಲ್ಲೆಗಳ ಆಧ್ಯಾತ್ಮಿಕ ಪರಂಪರೆಯ ಗಂಡುಕಲೆ ಯಕ್ಷಗಾನವನ್ನು ದಾವಣಗೆರೆಗೆ ಮೊಟ್ಟ ಮೊದಲು ಮಹಿಳೆಯರಿಗೆ ಯಕ್ಷಗಾನ ತರಬೇತಿ ನೀಡಿ ಯಕ್ಷಗಾನ ಪ್ರದರ್ಶನ ಮಾಡಿದ್ದು ಅತ್ಯದ್ಭುತ, ಶ್ಲಾಘನೀಯ ಎಂದು ಶ್ರೀ ವರಸಿದ್ಧಿ ವಿನಾಯಕ ಸಮಿತಿಯ ಅಧ್ಯಕ್ಷರಾದ ನಾಗೇಂದ್ರ ರೆಡ್ಡಿ ತಮ್ಮ ಮನದಾಳದ ಮಾತು ವ್ಯಕ್ತಪಡಿಸಿದರು.

ಚಿತ್ರ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಸಂಸ್ಕೃತಿ, ಯಕ್ಷಗಾನಗಳನ್ನು ಎಲೆಮರೆಯ ಕಾಯಿಗಳ ಮಹಿಳೆಯರಿಗೆ ಮಕ್ಕಳಿಗೆ ಮುಕ್ತವಾದ ಅವಕಾಶ, ವೇದಿಕೆ ಅವರ ಪ್ರತಿಭೆಗಳನ್ನು ಅನಾವರಣಗೊಳಿಸುತ್ತಿರುವ ಇತರ ಸಂಘ ಸಂಸ್ಥೆಗಳಿಗೆ ಮಾದರಿ ಎಂದು ಶ್ರೀ ವಿನಾಯಕ ದೇವಸ್ಥಾನದ ಪುರೋಹಿತರಾದ ಶಾಂತಯ್ಯ ಹಿರೇಮಠರವರು ತುಂಬಾ ಸಂತೋಷದಿAದ ಮಾತನಾಡಿದರು.

ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್, ಕಿರಿಯರಿಗೆ, ಹಿರಿಯರಿಗೆ ಶ್ರೀ ಗಣಪತಿ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ಕಲಾವಿದರು, ತೀರ್ಪುಗಾರರಾದ ಚಂದ್ರಶೇಖರ್ ಎಸ್.ಸಂಗಾ, ಸಮಿತಿಯ ಸದಸ್ಯರಾದ ಅವಿನಾಶ್, ಬಸವರಾಜ್, ಸಿದ್ದೇಶ್ವರ, ಮುನಿರಾಜು, ಅಜೀತ್ ಆಲೂರು ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.