ಕನ್ನಡಕ್ಕಾಗಿ ಹೋರಾಟ; ಕರ್ನಾಟಕ ಸಮರ ಸೇನೆಯ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯ

0
7

ಇತ್ತೀಚೆಗಷ್ಟೇ ಪುನರ್ರಚನೆಗೊಂಡ ಕರ್ನಾಟಕ ಸಮರ ಸೇನೆಯ ರಾಜ್ಯ ಘಟಕದ ಪದಾಧಿಕಾರಿಗಳ ಸಭೆ ದಾವಣಗೆರೆಯ ಕೇಂದ್ರ ಭಾಗದ ಕರ್ನಾಟಕ ಸಮರ ಸೇನೆಯ ಕಚೇರಿಯಲ್ಲಿ ನಡೆಯಿತು. ರಾಜ್ಯದ ವಿವಿಧ ಭಾಗಗಳ ರಾಜ್ಯ ಪದಾಧಿಕಾರಿಗಳು ಭಾಗವಹಿಸಿ ಕರ್ನಾಟಕ ಸಮರ ಸೇನೆಯ ಮುಂದಿನ ಸಂಘಟನಾತ್ಮಕ ಕ್ರಮಗಳು ಹಾಗೂ ಕನ್ನಡ ಜಲ, ನಾಡು-ನುಡಿ ಬಗೆಗಿನ ಹೋರಾಟದ ಬಗ್ಗೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಈ ವೇಳೆ ಕರ್ನಾಟಕ ಸಮರ ಸೇನೆಯ ಉಪಾಧ್ಯಕ್ಷ ಬಿ ರೇವಣಸಿದ್ದಯ್ಯ ಮಾತನಾಡಿ ಸಂಘಟನೆ ಹಲವು ವರ್ಷಗಳಿಂದ ಕರ್ನಾಟಕ ಸಮಸ್ಯೆಗಳು, ನಾಡು ನುಡಿ ಬಗ್ಗೆ ಹೋರಾಟ ಮಾಡಿಕೊಂಡು ಬಂದಿದೆ. ಎಷ್ಟೇ ಹೋರಾಟ ನಡೆಸಿದರೂ, ಮತ್ತೆ ಮತ್ತೆ ಬೇರೆ ಬೇರೆ ಸಮಸ್ಯೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತವ. ಹೀಗಾಗಿ ಮತ್ತೆ ಮತ್ತೆ ಹೋರಾಟಗಳು ಅನಿವಾರ್ಯವಾಗಿವೆ. ಸಮಸ್ಯೆಗಳಿಗೆ ಹೋರಾಟಗಳಿಂದ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ. ಸಂಘಟನೆಯಲ್ಲಿರುವ ರಾಜ್ಯ ಸಮಿತಿಯ ಪದಾಧಿಕಾರಿಗಳಿಂದ ವಾರ್ಡ್ ಮತ್ತು ಗ್ರಾಮ ಘಟಕದ ಸದಸ್ಯರವರೆಗೆ ಕ್ರಿಯಾಶೀಲ, ನಿಸ್ವಾರ್ಥ ಮನೋಭಾವದೊಂದಿಗೆ ಹೋರಾಟ ನಡೆಸಬೇಕಾಗಿದೆ ಇದರಿಂದ ಸಮರ್ಥವಾಗಿ ಹೋರಾಟ ಮತ್ತು ಸಂಘಟನೆ ಕಟ್ಟಲು ಸಾಧ್ಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ಸಮರ ಸೇನೆಯ ಕಾರ್ಯಧ್ಯಕ್ಷ ಡಾ. ಬಿ ವಾಸುದೇವ “ಸಂಘಟನೆಯು ಹಲವಾರು ರಾಜ್ಯಮಟ್ಟದ ಕಾರ್ಯಕ್ರಮಗಳನ್ನು ಈ ಹಿಂದೆ ನಿರ್ವಹಿಸಿದೆ. ನಾಡು ನುಡಿಯ ಸೇವೆಗೆ ಹಲವರೊಂದಿಗೆ ಸೇರಿ ನಮ್ಮ ಸಂಘಟನೆ ಕೆಲಸ ಮಾಡುತ್ತಾ ಬಂದಿದೆ. ಸಂಘಟನೆಯನ್ನು ಇನ್ನಷ್ಟು ವಿಸ್ತಾರ ಗೊಳಿಸಲು, ಗ್ರಾಮ ಮಟ್ಟಕ್ಕೆ ತಲುಪಿಸಲು ಮತ್ತು ನಾಡು ನುಡಿಯ ಸಮಸ್ಯೆಗಳನ್ನು ಗಳಿಗೆ ಪರಿಹಾರ ಕಂಡುಕೊಳ್ಳಲು ಸಮಿತಿಯನ್ನು ಪುನರ್ ರಚಿಸಲಾಗಿದ್ದು ಎಲ್ಲರೂ ಸಂಘಟನೆಯ ಮತ್ತು ನಾಡು ನುಡಿಯ ಹಿತರಕ್ಷಣೆಗೆ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.

ರಾಜ್ಯ ಸಮಿತಿಯ ಸದಸ್ಯ ಹಾಗೂ ಕಾನೂನು ಸಲಹೆಗಾರರಾದ ವಕೀಲ ನಾಗರಾಜ ಹಲವಾಗಿಲು ಮಾತನಾಡಿ “ಸಂಘಟನೆಯ ಹೋರಾಟಗಳಲ್ಲಿ ಹಲವು ಕಾನೂನು ಸಮಸ್ಯೆಗಳು ಎದುರಾಗುತ್ತವೆ ಇದರ ಬಗ್ಗೆ ಹೋರಾಟಗಾರರು ಮುಂಚಿತವಾಗಿ ತಿಳಿದುಕೊಳ್ಳಬೇಕು. ಕಾನೂನಾತ್ಮಕವಾಗಿ ಹೋರಾಟ ಮಾಡಿದಾಗ ನಾವು ಸರ್ಕಾರವನ್ನು ನೇರವಾಗಿ ಎದುರು ಹಾಕಿಕೊಳ್ಳಲು ಸಾಧ್ಯವಾಗುತ್ತದೆ. ಆಗ ನಮಗೆ ಕಾನೂನಿನ ರಕ್ಷಣೆ ದೊರೆಯುತ್ತದೆ. ಸಂಘಟನೆಯು ಕನ್ನಡ ಭಾಷೆ ನೆಲ ಜಲದ ಬಗ್ಗೆ ಹಲವು ಹೋರಾಟ ಮಾಡಿದ್ದು, ಉತ್ಸಾಹದಿಂದ ಇನ್ನು ಮುಂದೆ ಕೆಲಸ ಮಾಡಬೇಕು. ಹಲವು ಘಟಕಗಳ ಪುನರಚನೆಯನ್ನು ಮಾಡಬೇಕಿದೆ. ಈ ಹಿಂದೆ ರಾಜ್ಯ ಕಮಿಟಿಯು ಯಶಸ್ವಿ ಕಾರ್ಯಕ್ರಮವನ್ನು ಕೂಡ ನಡೆಸಿದೆ” ಎಂದು ಅನುಸರಿಸಬೇಕಾದ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.

ರಾಜ ಉಪಾಧ್ಯಕ್ಷ ಹಾಗೂ ಖಜಾಂಚಿ ಪತ್ರಕರ್ತ ಎಚ್ಎನ್ ಪ್ರಕಾಶ್ ಮಾತನಾಡಿ, “ಸಂಘಟನೆಗಾಗಿ ಸ್ವಾರ್ಥ ಸೇವಾ ಮನೋಭಾವದಿಂದ ಹೋರಾಟ ನಡೆಸಬೇಕು ಮುಂದಿನ ದಿನಗಳಲ್ಲಿ ಸದೃಢ ಹೋರಾಟಗಳನ್ನು ಕಟ್ಟೋಣ. ಎಲ್ಲರೂ ಒಟ್ಟಾಗಿ ಮುನ್ನಡೆಯೋಣ” ಎಂದು ತಿಳಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ, ಪತ್ರಕರ್ತ ವಿನಯ್ ಚಿಕ್ಕಂದವಾಡಿ ಮಾತನಾಡಿ “ಸಂಘಟನೆಯು ಹತ್ತಾರು ವರ್ಷಗಳಿಂದ ಕನ್ನಡದ ನೆಲ, ಜಲ ನಾಡು-ನುಡಿಯ ಬಗ್ಗೆ ಸಕ್ರಿಯ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಇಂತಹ ರಾಜ್ಯ ಮಟ್ಟದ ಸಂಘಟನೆಗೆ ಈಗ ಹಿರಿಯರ ಜೊತೆಗೆ ಹಲವು ಹೊಸಬರು ಸೇರಿಕೊಂಡಿದ್ದು ಸಂಘಟನೆಯನ್ನು ಹಲವು ಘಟಕಗಳೊಂದಿಗೆ ಗ್ರಾಮ ಘಟಕದವರೆಗೆ ಕಟ್ಟಬೇಕು. ತಳಮಟ್ಟದಿಂದಲೂ ನಾವು ಹೋರಾಟ ರೂಪಿಸಬೇಕು. ಕನ್ನಡ ನೆಲ ಜನದ ಬಗ್ಗೆ ಹೋರಾಟ ಅಷ್ಟೇ ಅಲ್ಲದೆ ಸಮಾಜದ ಶೋಷಿತ ವರ್ಗಗಳ ಬಗೆಗಿನ ಹೋರಾಟವು ಕೂಡ ಬೇಕಿದೆ. ಸಮಾಜದ ಶೋಷಿತರ ಮೇಲೆತ್ತುವ ಬಗ್ಗೆ ಹೋರಾಟಗಳನ್ನು ಕೂಡ ನಾವು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಬೇಕು” ಎಂದು ತಿಳಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಜಮಾಲುದ್ದೀನ್ ಮೂಲಿಮನಿ ಮಾತನಾಡಿ, “ಸಂಘಟನೆಯನ್ನು ಸಂಘಟನಾತ್ಮಕ ದೃಷ್ಟಿಯಿಂದ ನಾವು ನಗರದಿಂದ ಹಳ್ಳಿಗಳ ವರೆಗೆ ವಿಸ್ತರಿಸಬೇಕು ಸದೃಢವಾಗಿ ಕಟ್ಟಬೇಕು” ಎಂದು ಕರೆ ನೀಡಿದರು. ರಾಜ್ಯ ಕಾರ್ಯದರ್ಶಿ ಅಲ್ಲಾಭಕ್ಷಿ ಮಾತನಾಡಿ “ಸಂಘಟನೆಯಲ್ಲಿ ಉತ್ತಮ ಹೋರಾಟಗಾರರನ್ನು ನಾವು ಸಂಘಟಿಸಬೇಕಿದು, ನಾಡು ನುಡಿಯ ಹೋರಾಟಕ್ಕೆ ಸಂಘಟನೆಯನ್ನು ಅಣಿ ಮಾಡಬೇಕು” ಎಂದು ತಿಳಿಸಿದರು.

ರಾಜ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಮಹಿಳಾ ಉಪಾಧ್ಯಕ್ಷ ವೈ ಭಾಗ್ಯ ದೇವಿ, ರಾಜ್ಯ ಕಾರ್ಯದರ್ಶಿಗಳಾದ ಎನ್ ಗಿರೀಶ್ ಹೆಗಡೆ, ವೀರಯ್ಯ ಸ್ವಾಮಿ, ಜಿಪಿ ಪ್ರಕಾಶ್ ಹರಿಹರ, ಸೈಯದ್ ಸೇರಿದಂತೆ ಇತರ ಪದಾಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here