ಚಲನಚಿತ್ರ ನಾಯಕ ನಟ ಅನಿರುಧ್ದ್ ಜಟ್ಕರ್ ಅವರಿಂದ ಆಮಂತ್ರಣ ಸೇವಾ ಪ್ರತಿಷ್ಠಾನ ಇದರ ಲಾಂಛನ ಬಿಡುಗಡೆ

0
6

ಧರ್ಮಸ್ಥಳ : ಆಮಂತ್ರಣ ಸೇವಾ ಪ್ರತಿಷ್ಠಾನ ಇದರ ಲಾಂಛನವನ್ನು ಚಲನಚಿತ್ರ ನಾಯಕ ನಟ ಅನಿರುಧ್ದ್ ಜಟ್ಕರ್ ಜೂನ್ 25 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಸನ್ನಿಧಿಯಲ್ಲಿ ಬಿಡುಗಡೆ ಗೊಳಿಸಿದರು.

ಅಳದಂಗಡಿ ಅರಮನೆ ನಗರಿಯಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಆಮಂತ್ರಣ ಹಬ್ಬದಲ್ಲಿ ಭಾಗವಹಿಸಿ ಆಮಂತ್ರಣ ಆವಾರ್ಡ್ ಸ್ವೀಕರಿಸಿದ್ದನ್ನು ನೆನಪಿಸಿದ ಅನಿರುದ್ಧ್ ಇವರು ಆಮಂತ್ರಣ ಸೇವಾ ಪ್ರತಿಷ್ಠಾನ ಸಮಾಜ ಸೇವೆಯಂತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಮಾಡುವಂತೆ ಶ್ರೀ ಮಂಜುನಾಥ ಸ್ವಾಮಿ ಹರಸಲಿ ಸಂಸ್ಥೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹಾಗೂ ಬೆಂಗಳೂರಿನ ತಮ್ಮ ಮನೆಗೆ ಪ್ರೀತಿಯಿಂದ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಆಮಂತ್ರಣ ಸೇವಾ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿಜಯ ಕುಮಾರ್ ಜೈನ್, ಟ್ರಸ್ಟಿಗಳಾದ ಅರುಣ್ ಜೈನ್, ಸದಾನಂದ ಬಿ ಕುದ್ಯಾಡಿ, ಅಳದಂಗಡಿ ಸಿ.ಎ ಬ್ಯಾಂಕ್ ನಿರ್ದೇಶಕ ಕೊರಗಪ್ಪ, ಚಿಗುರು ಪತ್ರಿಕೆ ಸಂಪಾದಕ ಸಂಪತ್ ಬಿ.ಜೈನ್, ಪತ್ರಕರ್ತ ರಂಜನ್ ಕುಮಾರ್ ನೆರಿಯ ಹಾಗೂ ಗಣೇಶ್ ಕುಕ್ಕಾವು ಭಾರತಿ ಗುಂಡೂರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಮಂತ್ರಣ ಸೇವಾ ಪ್ರತಿಷ್ಠಾನದ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು.

ಅಳದಂಗಡಿ ಮೌಂಟ್ ಕಾರ್ಮೆಲ್ ಕಾಂಪ್ಲೆಕ್ಸ್ ನಲ್ಲಿ ಜುಲೈ 13 ರಂದು ಆಮಂತ್ರಣ ಸೇವಾ ಪ್ರತಿಷ್ಠಾನದ ಕಚೇರಿ ಉದ್ಘಾಟನೆ ನಡೆಯಲಿದ್ದು ಪತ್ರಕರ್ತ ರಿಗೆ ಹಾಗೂ ವಿವಿಧ ರಂಗದವರಿಗೆ ಸನ್ಮಾನ ನಡೆಯಲಿದೆ.

LEAVE A REPLY

Please enter your comment!
Please enter your name here