ಮೂಡುಬಿದಿರೆ: ಈ ವರ್ಷದ ಕೊನೆ ಬಾರಿಯ ಪ್ರವಾಸಿ ಗರನ್ನು ಹೊತ್ತು ತಂದ 7ಸೀ ವಯೋಜರ್ ಹಡಗಿನಲ್ಲಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರುಗೆ ಬಂದ ಹಡಗಿನಲ್ಲಿ ಬಂದವರಲ್ಲಿ ಸುಮಾರು ಜನ ಪ್ರವಾಸಿಗರು ಇತಿಹಾಸ ಪ್ರಸಿದ್ದ ಸಾವಿರ ಕಂಬ ಬಸದಿಯನ್ನು 09.05.2025 ರಂದು ಮಧ್ಯಾಹ್ನ 1.30ಕ್ಕೆ ಸಂದರ್ಶನ ಮಾಡಿದರು.
ಪ್ರವಾಸಿ ಗರಲ್ಲಿ ಅಮೇರಿಕಾ ದೇಶದ ಪ್ರಜೆ ಗಳು ಹೆಚ್ಚಿದ್ದರು ಈ ಸಂಧರ್ಭ ಉಪಸ್ಥಿತರಿದ್ದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಬಸದಿ ಇತಿಹಾಸ ಹಾಗೂ ಧರ್ಮಕ್ಕೆ ಸಂಬಂಧ ಪಟ್ಟ ಪ್ರಶ್ನೆಗಳಿಗೆ ಉತ್ತರಿಸಿದರು.
ಲೋಕ ಶಾಂತಿ ಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಪಾಕ್ ಭಯೋತ್ಪದಕ ಉಗ್ರ ದಾಳಿಯಿಂದ ಹುತಾತ್ಮರಾದ ಭಾರತಿ ಯ ಸೈನಿಕರಿಗೆ ಹಾಗೂ ನಾಗರೀಕರಿಗೆ ಉತ್ತಮ ಸದ್ಗತಿ ಕೋರಿ ಪ್ರಾರ್ಥಿಸಲಾಯಿತು ಮಂಗಳೂರು ಲಿಯಾ ಟ್ರಾವೆಲ್ಸ್ ರೋಹನ್ ಮತ್ತಿತರ ಪ್ರವಾಸಿ ಮಾರ್ಗ ದರ್ಶ ಕರು ಜತೆಗಿದ್ದರು ಶ್ರೀ ಗಳು ಎಲ್ಲರಿಗೂ ಶುಭ ಯಾತ್ರೆ ಕೋರಿ ಹರಸಿ ಆಶೀರ್ವಾದ ಮಾಡಿದರು.

