ಕಸಾಪ ಮಂಗಳೂರು ತಾಲೂಕಿನಿಂದ ಸಂಸ್ಥಾಪನಾ ದಿನಾಚರಣೆ ಆಚರಣೆ

0
17

ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ೧೧೨ನೇ ಸಂಸ್ಥಾಪನಾ ದಿನಾಚರಣೆಯು ತಾಲೂಕಿನ ಪ್ರಧಾನ ಕಾರ್ಯದರ್ಶಿಗಳ ನಿವಾಸ ”ಸರೋಜಿನಿ” ಯಲ್ಲಿ ನಡೆಯಿತು.

ಸಂಸ್ಥಾಪನಾ ದಿನಾಚರಣೆಯ ಸಂದೇಶವನ್ನು ಖ್ಯಾತ ಸಾಹಿತಿ ಹಾಗೂ ಪ್ರಕಾಶಕ ಶ್ರೀ ಕಲ್ಲಚ್ಚು ಮಹೇಶರವರು ನೀಡಿದರು.‌ ಅವರು‌ ಮಾತನಾಡುತ್ತಾ ದ.ಕ.ದಲ್ಲಿ ಹಲವಾರು ಅವೆಷ್ಟೋ ಭಾಷೆಗಳು ಇದ್ದರೂ ಕನ್ನಡಕ್ಕಾಗಿ ಹೋರಾಟ ಮಾಡುವ ಅಗತ್ಯ ಇಲ್ಲಿನ ಕನ್ನಡಿಗರಿಗೆ ಬರಲಿಲ್ಲ ಎನ್ನುವುದು ಹೆಮ್ಮೆಯ ವಿಷಯ. ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ಇನ್ನಿತರ ಕನ್ನಡ ಪ್ರೇಮಿಗಳ ಪ್ರಯತ್ನದ ಫಲವಾಗಿ ಸ್ವಾಯತ್ತ ಸಂಸ್ಥೆಯಾಗಿ ರೂಪುತಾಳಿದ ರಾಜ್ಯ ಕಸಾಪ ಇಂದು ಆರ್ಥಿಕವಾಗಿ‌ ಸಬಲವಾಗಿರುವ ಸಂಸ್ಥೆಯಾದರೂ ಇಂದೀಗ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವಂತಹ‌ ರೀತಿಯಲ್ಲಿ ಕಪ್ಪುಚುಕ್ಕೆ ಬಿದ್ದಿದೆ ಎನ್ನುವುದು ವಿಷಾದಕರ. ಅದನ್ನೆಲ್ಲವನ್ನೂ ಮೀರಿ‌ ಮುಂದೆ ಇದು ಸಮರ್ಥವಾಗಿ ಬೆಳೆಯುವಂತಾಗಬೇಕು ಎನ್ನುವುದೇ ನಮ್ಮೆಲ್ಲರ ಆಶಯ ಎಂದರು. ಅವರು ತಮ್ಮ ಮಾತುಗಳನ್ನು ಮುಂದುವರಿಸುತ್ತಾ. ರಾಜ್ಯ ಮಟ್ಟದಲ್ಲಿ ನಡೆಯುವ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರು ಕಡೆಗಣಿಸಲ್ಪಡುತ್ತಿರುವುದು ಕೂಡಾ ನೋವಿನ ವಿಚಾರವಾಗಿದೆ ಎಂದೂ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷರಾದ ಡಾ. ಮಂಜುನಾಥ ರೇವಣಕರರು‌ ವಹಿಸಿದ್ದರು. ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಮುರಳಿ ಮೋಹನ ಚೂಂತಾರ್ ಪ್ರಸ್ತಾವನೆ ಮಾಡಿದರು. ಕೋಶಾಧಿಕಾರಿ‌ ಸುಬ್ರಾಯ ಭಟ್ ಸ್ವಾಗತಿಸಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ ಪ್ರಸಾದ ಜೀಯವರು ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಸನತ್ ಕುಮಾರ್ ಜೈನ್, ತಾಲೂಕು ಸಮಿತಿ ಮಹಿಳಾ ಪ್ರತಿನಿಧಿ ಡಾ. ಮೀನಾಕ್ಷಿ ರಾಮಚಂದ್ರ, ಡಾ. ರಾಜಶ್ರೀ, ರವೀಂದ್ರನಾಥ್, ಮುಕುಂದರಾಜ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here