
ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ಭಾಗದ ಜನತೆಯ ದಶಕಗಳ ಬೇಡಿಕೆ ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕಟ್ಟಡಕ್ಕೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ 65 ಲಕ್ಷ ಅನುದಾನವನ್ನು ಮಂಜೂರು ಗೊಳಿಸಿ ದಿನಾಂಕ 28.09.2026 ರಂದು ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಹಾಗೂ ಬೆಳ್ತಂಗಡಿಯ ಜನಪ್ರಿಯ ಶಾಸಕರಾದ ಹರೀಶ್ ಪೂಂಜಾ ರವರು ಗಣ್ಯರ ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಿಸಿದರು.

ದಶಕಗಳ ಬೇಡಿಕೆಯನ್ನು ಈಡೇರಿಸುತ್ತಿರುವ ಮಾನ್ಯ ಸಂಸದರು ಹಾಗೂ ಶಾಸಕರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಇಂದಬೆಟ್ಟು ಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀಕಾಂತ್ ಎಸ್ ಇಂದಬೆಟ್ಟು, ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಆಶಾಲತಾ, ಆನಂದ ಅಡಿಲು, ಸತೀಶ್ ಗೌಡ ಚೌಕದಕಟ್ಟೆ, ಪ್ರಮೋದ್ ಕುಮಾರ್ ಬೆದ್ರಬೆಟ್ಟು, ತಾಲೂಕು ಆರೋಗ್ಯಾಧಿಕಾರಿ, ಬೂತ್ ಸಮಿತಿಯ ಅಧ್ಯಕ್ಷರುಗಳಾದ ಶಶಿಧರ ಗೌಡ ಪಡೆಂಕ್ಕಲ್, ಸಂಜೀವ ಗೌಡ ದರ್ಖಸು, ಗಣೇಶ್ ಆಚಾರ್ಯ ಮುಂಡ್ರಬೆಟ್ಟು, ನವೀನ್ ಜೈನ್, ಪ್ರತೀಶ್ ಕಡಿತ್ಯಾರು, ಯುವ ಮೋರ್ಚಾ ಸದಸ್ಯರಾದ ಸಂತೋಷ್ ಕುಮಾರ್ ಉಂಬೆಜೆ, ಪಳನಿ ಸ್ವಾಮಿ ಎರ್ಮಳ, ಮಂಡಲದ ಪದಾಧಿಕಾರಿಗಳು ಪಕ್ಷದ ಅನನ್ಯ ಜವಾಬ್ದಾರಿಯ ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮದ ಹಿರಿಯರು ಕಿರಿಯರು ಹಾಗೂ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು, ಚಂದ್ರಶೇಖರ ಕಾಂಜಾನು ಕಾರ್ಯಕ್ರಮ ನಿರೂಪಿಸಿದರು. ಗ್ರಾಮಸ್ಥರು ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಂಸದರು ಹಾಗೂ ಶಾಸಕರಿಗೆ ನೀಡಿ ವಿನಂತಿಸಿದರು ಹಂತ ಹಂತವಾಗಿ ತಮ್ಮ ಬೇಡಿಕೆಗಳನ್ನು ಇಬ್ಬರು ಸೇರಿ ಮುಂದಿನ ದಿನಗಳಲ್ಲಿ ಈಡೇರಿಸುವುದಾಗಿ ತಿಳಿಸಿದರು.
