ವಿದೇಶಿ ಉದ್ಯೋಗದ ಆಮಿಷ ಲಕ್ಷಾಂತರ ರೂ. ವಂಚನೆ

0
58

ಉಡುಪಿ: ವಿದೇಶದಲ್ಲಿ ಹೌಸ್​ ಕೀಪಿಂಗ್​ ಸೂಪರ್​ವೈಸರ್​ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನಿಟ್ಟೂರಿನ ವ್ಯಕ್ತಿಯೊಬ್ಬರಿಂದ ಹಂತ ಹಂತವಾಗಿ ಲಕ್ಷಾಂತರ ರೂ. ಹಣ ಹಾಗೂ ಪಾಸ್​ಪೋರ್ಟ್​ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ನಿಟ್ಟೂರಿನ ಎನ್​. ಆರ್​. ಪದ್ಮನಾಭ ಉಪಾಧ್ಯ ವಂಚನೆಗೊಳಗಾದವರು. ಆಶ್ಲೆ ಕರ್ನೇಲಿಯೋ, ಸವಿತಾ, ಪ್ರಕೃತಿ ಹಾಗೂ ಪ್ರಶಾಂತ್​ ಎಂಬುವರೇ ವಂಚನೆ ಎಸಗಿದ ಆರೋಪಿಗಳು.

ಉದ್ಯೋಗ ಹುಡುಕುತ್ತಿದ್ದ ಪದ್ಮನಾಭ ಉಪಾಧ್ಯ ಅವರನ್ನು 2025ರ ಫೆಬ್ರವರಿ 12ರಂದು ಸಂಪರ್ಕಿಸಿದ್ದ ಮೊದಲ ಆರೋಪಿ ಆಶ್ಲೆ ಕರ್ನೇಲಿಯೋ, ಯುನೈಟೆಡ್​ ಕಿಂಗ್​ಡಮ್​ (ಯು.ಕೆ.) ದೇಶದಲ್ಲಿ ಹೌಸ್​ ಕೀಪಿಂಗ್​ ಸೂಪರ್​ವೈಸರ್​ ಕೆಲಸ ಕೊಡಿಸುವುದಾಗಿ ನಂಬಿಸಿದ್ದಳು. ಬಳಿಕ ತನ್ನ ಸಹಾಯಕಿ ಸವಿತಾ ಎಂಬಾಕೆಯ ಮೊಬೈಲ್​ ಸಂಖ್ಯೆ ನೀಡಿದ್ದಳು. ವೀಸಾ ಪ್ರಕ್ರಿಯೆಗಾಗಿ 2 ಲಕ್ಷ ರೂ. ಪ್ರೊಸೆಸಿಂಗ್​ ಶುಲ್ಕ ಪಾವತಿಸುವಂತೆ ಸವಿತಾ ತಿಳಿಸಿದ ಹಿನ್ನೆಲೆಯಲ್ಲಿ, ಪದ್ಮನಾಭ ಅವರು 2025ರ ಮಾರ್ಚ್​ 19ರಂದು ಆಕೆಯ ಬ್ಯಾಂಕ್​ ಆಫ್​ ಬರೋಡ ಖಾತೆಗೆ ಹಣ ಜಮಾ ಮಾಡಿದ್ದರು.

ನಂತರ ಆರೋಪಿಗಳಾದ ಪ್ರಕೃತಿ ಮತ್ತು ಪ್ರಶಾಂತ್​ ಎಂಬುವರು ಕೈಜೋಡಿಸಿ ಮೆಡಿಕಲ್​ ಪರೀಕ್ಷೆ, ವೀಸಾ ಸ್ಟಾಂಪಿಂಗ್​ ಹಾಗೂ ಎಂಬೆಸಿ ಪ್ರೊಸೆಸಿಂಗ್​ ಹೆಸರಿನಲ್ಲಿ ಪದ್ಮನಾಭ ಅವರಿಂದ ಹಂತ ಹಂತವಾಗಿ ಒಟ್ಟು 6,23,000 ರೂ. ನಗದು ಹಾಗೂ ಪಾಸ್​ಪೋರ್ಟ್​ ಪಡೆದುಕೊಂಡಿದ್ದರು. ಕೆಲ ದಿನಗಳ ನಂತರ “ನಿಮ್ಮ ವೀಸಾ ತಿರಸತಗೊಂಡಿದೆ ಎಂದು ಹೇಳಿದ ಆರೋಪಿಗಳು, ಹಣ ಮತ್ತು ಪಾಸ್​ಪೋರ್ಟ್​ ವಾಪಸ್​ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸದ್ಯ ನ್ಯಾಯಾಲಯದ ನಿರ್ದೇಶನದ ಮೇರೆಗೆ ಉಡುಪಿ ನಗರ ಪೊಲೀಸ್​ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here