ಉಡುಪಿ: ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ಉಡುಪಿಯ ಆದರ್ಶ ಆಸ್ಪತ್ರೆಯ ವತಿಯಿಂದ ನವೆಂಬರ್ 15ರಂದು ಭಾನುವಾರ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರವು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಆದರ್ಶ ಆಸ್ಪತ್ರೆಯಲ್ಲಿ ನಡೆಯಲಿದೆ. ಈ ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ (RBS), ಮೂತ್ರ ಪರೀಕ್ಷೆ, HbA1c (ಮೂರು ತಿಂಗಳ ಸರಾಸರಿ ರಕ್ತದಲ್ಲಿನ ಸಕ್ಕರೆ ಪ್ರಮಾಣ), ಸೀರಮ್ ಕ್ರಿಯಾಟಿನಿನ್ ಹಾಗೂ ಲಿಪಿಡ್ ಪ್ರೊಫೈಲ್ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ಮಾಡಲಾಗುತ್ತದೆ. ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ಸಮಾಲೋಚನೆಯ ಸೌಲಭ್ಯವೂ ಇರಲಿದೆ.
ಇದರೊಂದಿಗೆ ನವೆಂಬರ್ 16ರಿಂದ 30ರವರೆಗೆ ವಿಶೇಷ ರಿಯಾಯಿತಿ ದರದಲ್ಲಿ ಡಯಾಬಿಟಿಸ್ ಕೇರ್ ಪ್ಯಾಕೇಜ್ನ್ನು ಕೇವಲ ರೂ.2,200ಕ್ಕೆ ಒದಗಿಸಲಾಗುತ್ತಿದೆ. ಈ ಪ್ಯಾಕೇಜ್ನಲ್ಲಿ ಸಿಬಿಸಿ, ಮೂತ್ರ ಪರೀಕ್ಷೆ, ಲಿಪಿಡ್ ಪ್ರೊಫೈಲ್, ಫಾಸ್ಟಿಂಗ್ ಮತ್ತು ಪೋಸ್ಟ್ಪ್ರಾಂಡಿಯಲ್ ಬ್ಲಡ್ ಶುಗರ್, ಕ್ರಿಯಾಟಿನಿನ್, HbA1c, ಲಿವರ್ ಫಂಕ್ಷನ್ ಟೆಸ್ಟ್, ಯೂರಿಕ್ ಆಸಿಡ್, ಇಸಿಜಿ, ಎಕೋ/ಟಿಎಂಟಿ ಸೇರಿದಂತೆ ವಿವಿಧ ಪರೀಕ್ಷೆಗಳು ಹಾಗೂ ತಜ್ಞ ವೈದ್ಯರ ಸಮಾಲೋಚನೆ ಲಭ್ಯವಿದೆ.

