ಅ.3ರಂದು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ

0
21

ಕಾರ್ಕಳ : ದಿ. ಶ್ರೀ ಎಂ. ಕೆ. ವಿಜಯ ಕುಮಾರ್‌ರವರ ಸ್ಮರಣಾರ್ಥ ಅವರ ಶಿಷ್ಯವೃಂದ ಹಾಗೂ ಅಭಿಮಾನಿ ಬಳಗ ಇವರ ನೇತೃತ್ವದಲ್ಲಿ ಹಾಗೂ ಕಾರ್ಕಳ ವಕೀಲರ ಸಂಘ (ರಿ.) ಕಾರ್ಕಳ ಡಾ। ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳ ಇದರ ಸಹಯೋಗದಲ್ಲಿ ನ್ಯಾಯವಾದಿಗಳು ಹಾಗು ನ್ಯಾಯಾಲಯದ ಸಿಬ್ಬಂದಿಗಳು ಮತ್ತು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವು ದಿನಾಂಕ 03-10-2026 ಶನಿವಾರದಂದು ಸಮಯ ಬೆಳಿಗ್ಗೆ 10 ಗಂಟೆಯಿಂದ ಕಾರ್ಕಳ ನ್ಯಾಯಾಲಯದ ಸಂಕೀರ್ಣದಲ್ಲಿ ನಡೆಯಲಿದೆ.

ಡಾ| ಟಿ. ಎಂ. ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಇಲ್ಲಿಯ ನುರಿತ ವೈದ್ಯರಿಂದ ಕಣ್ಣಿನ ತಪಾಸಣೆ, ಬಿ.ಪಿ. ಶುಗರ್ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ನಡೆಯಲಿದೆ. ಕೆಂಪು ಕಣ್ಣು, ದೃಷ್ಟಿ ಕಡಿಮೆ, ಕಣ್ಣಿನಲ್ಲಿ ದುರ್ಮಾಂಸ, ಕಣ್ಣು ನೋವು, ಕಣ್ಣಿನ ಪೊರೆ /ಕ್ಯಾಟರಾಕ್ಟ್ ಸಮಸ್ಯೆ, ಕಣ್ಣಿನ ತಪಾಸಣೆ ಮಾಡಲು ಬಯಸುವವರು ಭಾಗವಹಿಸಬಹುದು. ತಮಗೆಲ್ಲರಿಗೂ ಆದರದ ಸ್ವಾಗತ ಬಯಸುವ ದಿ। ಎಂ. ಕೆ. ವಿಜಯ ಕುಮಾರ್ ಅವರ ಶಿಷ್ಯವೃಂದ ಮತ್ತು ವಕೀಲರ ಸಂಘ (ರಿ.), ಕಾರ್ಕಳ

(ವಿ.ಸೂ. : ಯಾವುದೇ ವಿಮೆ ಸೌಲಭ್ಯ ಇಲ್ಲದಿರುವವರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಲಾಗುವುದು)