ಧನ್ವಂತರಿ ಜಯಂತಿ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ

0
5

ಧನ್ವಂತರಿ ಜಯಂತಿ ದಿನಾಚರಣೆ ಪ್ರಯುಕ್ತ ತಾ 06.11.2026 ಶುಕ್ರವಾರದಂದು ಆರೋಗ್ಯ ಭಾರತಿ ಮಂಗಳೂರು ಹಾಗೂ ಲಯನ್ಸ್ ಕ್ಲಬ್, ಕದ್ರಿ ಹಿಲ್ಸ್ ಮಂಗಳೂರು ಇವರ ಸಹಯೋಗದೊಂದಿಗೆ ಶ್ರೀ ವೇದಮಾಯು ಆಯುರ್ವೇದ ಆಸ್ಪತ್ರೆ, ಬಾರೆಬೈಲ್ ರಸ್ತೆ, ಯೆಯ್ಯಾಡಿ ಇವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಗಣ್ಯರಿಂದ ದೀಪ ಬೆಳಗಿಸಿ ಧನ್ವಂತರಿ ದೇವರಿಗೆ ಪುಷ್ಪಾರ್ಚನೆ ಹಾಗೂ ಧನ್ವಂತರಿ ಶ್ಲೋಕ ಪಠಿಸುವುದರ ಇದರ ಉದ್ಘಾಟನಾ ಕಾರ್ಯಕ್ರಮವು ನೆರವೇರಿತು.

ಶ್ರೀ ವೇದಮಾಯು ಆಯುರ್ವೇದ ಆಸ್ಪತ್ರೆಯ ಡಾ ಕೇಶವ ರಾಜ್ ಅವರು ಪ್ರಾಸ್ತಾವಿಕ ಭಾಷಣ ಮಾಡಿ ಗಣ್ಯರನ್ನು ಸ್ವಾಗತಿಸಿದರು. ಆರೋಗ್ಯ ಭಾರತಿಯ ಪ್ರಾಂತ ಉಪಾಧ್ಯಕ್ಷರೂ ಜಿಲ್ಲಾ ಗೌರವಾಧ್ಯಕ್ಷರೂ ಆದ ಡಾ ಮುರಳೀ ಮೋಹನ ಚೂಂತಾರು ಅವರು ಧನ್ವಂತರಿ ಜಯಂತಿ ದಿನಾಚರಣೆಯ ಪ್ರಾಧಾನ್ಯತೆಯನ್ನು ವಿವರಿಸಿ ಮಾತನಾಡಿದರು.

ಹೆಚ್ಚಿನ ಸಂಖ್ಯೆಯಲ್ಲಿ ಜನರು ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗವನ್ನು ಪಡೆದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಶ್ರೀದೇವಿ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಸುಧಾಕರ ಶೆಟ್ಟಿಗಾರ್, ಕಾರ್ಯದರ್ಶಿ ಶ್ರೀಮತಿ ವಿದ್ಯಾ ಕಾಮತ್, ಖಜಾಂಜಿ ಶ್ರೀ ರತ್ನಾಕರ್ ಪಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹರಾದ ಶ್ರೀ ಪಿ.ಯಸ್. ಪ್ರಕಾಶ್, ಆರೋಗ್ಯ ಭಾರತಿಯ ವಿಭಾಗ ಸಂಚಾಲಕರಾದ ಶ್ರೀ ಪುರುಷೋತ್ತಮ ದೇವಸ್ಯ, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ಉಮೇಶ್ ಪ್ರಭು ಬನ್ನೂರು, ಜಿಲ್ಲಾ ಜೊತೆ ಕಾರ್ಯದರ್ಶಿ ಶ್ರೀ ದಿನೇಶ್ ಚಂದ್ರಗಿರಿ, ಆರೋಗ್ಯ ಭಾರತಿಯ ಕಾರ್ಯಕರ್ತರಾದ ಶ್ರೀ ಕದ್ರಿ ವಿಕ್ರಮ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.