ಕಾಪುವಿನ ಕೋತಲ್ಕಟ್ಟೆಯಲ್ಲಿರುವ ಡಾ.ಕೆ.ಎಸ್.ಭಟ್ಸ್ ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್ ನಲ್ಲಿ ಐ ನೀಡ್ಸ್ ಸಂಸ್ಥೆ ಹಾಗೂ ದೂತಪಾಪೆಶ್ವರ ಲಿಮಿಟೆಡ್ ಸಹಯೋಗ ದೊಂದಿಗೆ ನವೆಂಬರ್ 1 ಆದಿತ್ಯವಾರದಂದು ಸಾರ್ವಜನಿಕ ಉಚಿತ ಆರೋಗ್ಯ ತಪಾಸಣಾ , ಉಚಿತ ನೇತ್ರ ತಪಾಸಣಾ , ಉಚಿತ ಮೂಳೆ ಸಾಂದ್ರತಾ ತಪಾಸಣಾ ಶಿಬಿರ ಜರಗಿತು.
ಆರೋಗ್ಯ ಶಿಬಿರವನ್ನು ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರ್ಮೇ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು. ಸಮಾರಂಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ಡಾ. ನಾಗಾನಂದ ಭಟ್ ಕಾಪು ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಅರ್ಜುನ್ ಭಂಡಾರ್ಕರ್ ಬಂಟ್ವಾಳ ಇವರನ್ನು ಸರ್ವರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ನೂರಕ್ಕೂ ಅಧಿಕ ಸಾರ್ವಜನಿಕರು ಈ ಆರೋಗ್ಯ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯರಾದ ಗೋಪಾಲ್ ಕೃಷ್ಣ ನಾಯಕ್ ಹರಿಖಂಡಿಗೆ, ಲಕ್ಷ್ಮೀoದ್ರ ಭಟ್ ಕಾಪು, ಮಾಜಿ ಶಾಸಕರಾದ ಲಾಲಾಜಿ ಅರ್ ಮೆಂಡನ್, ದಂಡತೀರ್ಥ ಪ್ರತಿಷ್ಟಾನದ ಮುಖ್ಯಸ್ಥರಾದ ಶ್ರೀ ಸೀತಾರಾಂ ಭಟ್, ಕಾಪು ಲಕ್ಷ್ಮೀ ಜನಾರ್ಧನ ದೇವಳದ ಆಡಳಿತ ಮೊಕ್ತೇಸರರಾದ ಹಾಗೂ ಸಾಯಿರಾಧ ಗ್ರೂಪ್ ಮುಖ್ಯಸ್ಥರಾದ ಮನೋಹರ್ ಶೆಟ್ಟಿ ಕಾಪು, ಕಾಪು ಶ್ರೀ ವೆಂಕಟರಮಣ ಹಾಗೂ ಹಳೆ ಮಾರಿಯಮ್ಮ ದೇವಳದ ಆಡಳಿತ ಮೊಕ್ತೇಸರರಾದ ಪ್ರಸಾದ್ ಗೋಕುಲ್ ದಾಸ್ ಶೆಣೈ ಕಾಪು, ಕಾಪು ಹೊಸ ಮಾರಿಯಮ್ಮ ದೇವಳದ ಆಡಳಿತ ಮೊಕ್ತೇಸರರಾದ ನಡಿಕೆರೆ ರತ್ನಾಕರ್ ಶೆಟ್ಟಿ, ಕೆ ಎಂ ಎಫ಼್ ನಿರ್ದೇಶಕರಾದ ಶ್ರೀ ದಿವಾಕರ್ ಶೆಟ್ಟಿ, ಕಾಪು ಪುರಸಭಾ ಕೋತಲ್ಕಟ್ಟೆ ವಾರ್ಡ್ ಕೌನ್ಸಿಲರ್ ಸುರೇಶ್, ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಮಾಧವ್ ಪಾಲನ್, ಕೋತಾಲ್ಕಟ್ಟೆ ಬಬ್ಬು ಸ್ವಾಮಿ ದೈವಸ್ಥಾನ ಮುಖ್ಯಸ್ಥ ಶೀನ, ವಿಧ್ಯಾಸಾಗರ್ ಎಜುಕೇಶನ್ ಟ್ರಸ್ಟ್ ಮುಖ್ಯಸ್ಥ ಸತೀಶ್ ಕುಂದರ್, ಐ ನೀಡ್ಸ್ ಆಪ್ಟಿಕಲ್ ಸಂಸ್ಥೆ ಮುಖ್ಯಸ್ಥ ಗಜಾನನ ನಾಯಕ್ ಮತ್ತು ಸಹೋದರರು, ದೂತ ಪಾಪೆಶ್ವರ ಸಂಸ್ಥೆಯ ನಾಗೇಶ್ ಶೆಣೈ, ಸುಧೀಂದ್ರ ಆಯುರ್ ಕ್ಲಿನಿಕಿನ ಮುಖ್ಯ ಚಿಕಿತ್ಸಕರಾದ ಡಾ.ಸದಾನಂದ ಎಲ್ ಭಟ್, ಡಾ.ಸುಷ್ಮಾ ಎಸ್ ಭಟ್ ಕಾಪು ಹಾಗೂ ಮಾಧ್ಯಮ ಮಿತ್ರರು, ಊರ ಪರವೂರ ಬಂಧು ಮಿತ್ರರು ಉಪಸ್ಥಿತರಿದ್ದರು.

