ಹೆಬ್ರಿಯಲ್ಲಿ ಕಿವಿಯ ಉಚಿತ ಶ್ರವಣ ತಪಾಸಣೆ ಶಿಬಿರ – ಶ್ರವಣ ಯಂತ್ರಗಳ ವಿತರಣೆ

0
125


೫೦ ಕ್ಕೂ ಹೆಚ್ಚು ಮಂದಿಗೆ ಶಿಬಿರದ ಪ್ರಯೋಜನ : ಶ್ರವಣ ಯಂತ್ರ ವಿತರಣೆ.
ಹೆಬ್ರಿ : ಜೀವನದಲ್ಲಿ ಒಂದಂಶವನ್ನು ಸಮಾಜದ ಬಡವರ ಸೇವೆಗಾಗಿ ಟೀಮ್ ಈಶ್ವರ್ ಮಲ್ಪೆ ವಿನಿಯೋಗಿಸುತ್ತಿದ್ದಾರೆ. ಆ ಮೂಲಕ ಶ್ರವಣ ದೋಷವಿರುವ ಚಿಕಿತ್ಸಿಗಾಗಿ ಶಿಬಿರವನ್ನು ಆಯೋಜಿಸುವ ಮೂಲಕ ಜನಸೇವೆಯನ್ನು ಮಾಡುತ್ತಿದ್ದಾರೆ. ಕಿವಿಯ ಸಮಸ್ಯೆಗಳ ಬಗ್ಗೆ ಒತ್ತು ನೀಡಿ ಚಿಕಿತ್ಸೆ ಕೊಡಿಸುವುದು ಟೀಮ್ ಈಶ್ವರ್ ಮಲ್ಪೆ ಅವರ ಉದ್ದೇಶವಾಗಿದೆ ಎಂದು ಟೀಮ್ ಈಶ್ವರ್ ಮಲ್ಪೆ ಬಳಗದ ಸಂಚಾಲಕ ಲವ ಕುಮಾರ್ ಹೇಳಿದರು.
ಅವರು ಮಂಗಳವಾರ ರೋಟರಿ ಸಮುದಾಯದಳ ಹೆಬ್ರಿ ರಾಮಕೃಷ್ಣ ಆಚಾರ್ಯ ಮತ್ತು ಕೃಷ್ಣರಾಜ ಆಚಾರ್ಯ ನೇತ್ರತ್ವದಲ್ಲಿ ಹೆಬ್ರಿ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘ ಮತ್ತು ಟೀಮ್‌ ಈಶ್ವರ್‌ ಮಲ್ಪೆ ಸಹಯೋಗದಲ್ಲಿ ನಡೆದ ಕಿವಿಯ ಉಚಿತ ಶ್ರವಣ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆ ಹಾಗೂ ಬೆಂಗಳೂರು ಸೇರಿದಂತೆ 25 ಕಡೆಗಳಲ್ಲಿ ಕಿವಿಯ ಶ್ರವಣ ತಪಾಸಣಾ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ ಎಂದು ಲವ ಕುಮಾರ್ ಹೇಳಿದರು.
ಹೆಬ್ರಿ ಗ್ರಾಮ ಪಂಚಾಯತಿ ಅಧ್ಯಕ್ಷ ತಾರಾನಾಥ ಬಂಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ ಹೆಬ್ರಿ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ಆರೋಗ್ಯ ಶಿಬಿರಗಳಿಗೆ ಪಂಚಾಯತಿ ಸಹಕಾರ ನೀಡಲಿದೆ ಎಂದರು. ಶಿಬಿರದ ಸಂಘಟಕರಾದ ಹೆಬ್ರಿ ರೋಟರಿ ಸಮುದಾಯದಳದ ಗೌರವಾಧ್ಯಕ್ಷ ಎಚ್.ರಾಮಕೃಷ್ಣ ಆಚಾರ್ಯ ಮಾತನಾಡಿ ನಾವು ಹೆಬ್ರಿಯಲ್ಲಿ ಜನತೆಗಾಗಿ ಕಳೆದ ಹಲವು ವರ್ಷಗಳಿಂದ ಪ್ರತೀವಾರವೂ ದಂತ ಚಿಕಿತ್ಸಾ ಶಿಬಿರವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಕಿವಿಯ ಶ್ರವಣ ತಪಾಸಣಾ ಶಿಬಿರವನ್ನು ಆಯೋಜಿಸುವ ಅವಕಾಶ ಟೀಮ್‌ ಈಶ್ವರ್‌ ಮಲ್ಪೆ ಸಹಯೋಗದಲ್ಲಿ ದೊರೆತಿದೆ. ಶಿಬಿರವನ್ನು ಯಶಸ್ವಿಯಾಗಿ ಮಾಡಿದ್ದೇವೆ. ಅರ್ಹರಿಗೆ ಸೌಲಭ್ಯಗಳು ದೊರೆಯಬೇಕು, ಹೆಬ್ರಿ ರೋಟರಿ ಸಮುದಾಯದಳ ಮೂಲಕ ಇಂತಹ ಶಿಬಿರಗಳನ್ನು ನಿರಂತರವಾಗಿ ಮಾಡುತ್ತೇವೆ ಎಂದು ಟೀಮ್‌ ಈಶ್ವರ್‌ ಮಲ್ಪೆ ಬಳಗಕ್ಕೆ ಕೃತಜ್ಞತೆ ಸಲ್ಲಿಸಿದರು. ತಜ್ಞ ವೈಧ್ಯೆ ಡಾ.ಅಂಕಿತಾ ಮತ್ತು ಬಳಗದವರು ಶಿಬಿರವನ್ನು ನಡೆಸಿಕೊಟ್ಟರು.
ಹೆಬ್ರಿ ರೋಟರಿ ಸಮುದಾಯದಳದ ಗೌರವಾಧ್ಯಕ್ಷ ಎಚ್.ರಾಮಕೃಷ್ಣ ಆಚಾರ್ಯ, ಅಧ್ಯಕ್ಷ ಕೃಷ್ಣರಾಜ ಆಚಾರ್ಯ, ಸೀತಾನದಿ ಸೌಖ್ಯ ಯೋಗ ಟ್ರಸ್ಟ್‌ ಅಧ್ಯಕ್ಷ ವಿಠ್ಠಲ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಹೆಬ್ರಿ ತಾಲ್ಲೂಕು ಯೋಜನಾಧಿಕಾರಿ ಲೀಲಾವತಿ, ಹೆಬ್ರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸದಾಶಿವ ಸೇರ್ವೆಗಾರ್, ಹೆಬ್ರಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಕುಮಾರ್ ಮುನಿಯಾಲ್, ತಜ್ಞ ವೈಧ್ಯೆ ಡಾ.ಅಂಕಿತಾ, ಹೆಬ್ರಿ ಲಯನ್ಸ್‌ ಕ್ಲಬ್‌ ಪ್ರಮುಖರಾದ ಟಿ.ಜಿ.ಆಚಾರ್ಯ ಹೆಬ್ರಿ, ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಜನಾರ್ಧನ್‌, ಹೆಬ್ರಿ ರೋಟರಿ ಸಮುದಾಯದಳದ ಸದಸ್ಯರಾದ ಲಕ್ಷ್ಮಣ್‌ ಭಟ್‌, ನಿತ್ಯಾನಂದ ಭಟ್‌, ಶಶಿಕಿರಣ್‌ ಭಟ್‌, ಕೀರ್ತಿ ಭಟ್‌, ಗಣೇಶ ನಾಯಕ್‌ ಮುಂತಾದವರು ಉಪಸ್ಥಿತರಿದ್ದರು. ವಿವಿಧ ಸಂಘಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು. ರಾಮಕೃಷ್ಣ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಸದಾಶಿವ ಬಾಯರಿ ವಂದಿಸಿ ಪ್ರಕಾಶ ಭಟ್ ನಿರೂಪಿಸಿದರು. ಕೃಷ್ಣರಾಜ ಆಚಾರ್ಯ ಸ್ವಾಗತಿಸಿದರು. ೫೦ ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಹಲವರಿಗೆ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರ ವಿತರಿಸಲಾಯಿತು.

LEAVE A REPLY

Please enter your comment!
Please enter your name here