ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲೆಯಲ್ಲಿ ಉಚಿತ ನೋಟ್ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ

0
32

ಮೂಡುಬಿದಿರೆ: ಸರ್ವೋದಯ ಪ್ರೌಢಶಾಲೆ ಕಲ್ಲಮುಂಡ್ಕೂರುವಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಸಮವಸ್ತ್ರವನ್ನು ದಾನಿಗಳಾದ ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ತಂಡದ ಅಭಿಮಾನಿಗಳಾದ ತೇಜಾಕ್ಷಿ ಗಜೇಂದ್ರ ಸನಿಲ್ ಮತ್ತು ಸರ್ವೋದಯ ಫ್ರೆಂಡ್ಸ್ ಕಲ್ಲಮುಂಡ್ಕೂರು ಇವರ ವತಿಯಿಂದ ಸುಮಾರು 70 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಸಮವಸ್ತ್ರವನ್ನು ಬುಧವಾರ ವಿತರಿಸಲಾಯಿತು.


ನಂತರ ಮಾತನಾಡಿದ ಮೌಂಟ್ ರೋಜರಿ ಆಸ್ಪತ್ರೆಯ ವಿನೀತ್, ಕನ್ನಡ ಮಾಧ್ಯಮದಲ್ಲಿ ಓದುತ್ತಿರುವವ ವಿದ್ಯಾರ್ಥಿಗಳಿಗೆ ತಾವು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವುದೆಂಬ ಕೀಳರಿಮೆಯ ಮನೋಭಾವನೆ ಬೇಡ, ಶೈಕ್ಷಣಿಕ ವರ್ಷದಲ್ಲಿ ಒಳ್ಳೆಯ ಸಾಧನೆ ಮಾಡಿ ಓದಿದ ಶಾಲೆಗೆ, ಶಿಕ್ಷಕರಿಗೆ ಪೋಷಕರಿಗೆ ಕೀರ್ತಿಯನ್ನು ತನ್ನಿ ಎಂದು ಕಿವಿ ಮಾತು ಹೇಳಿದರು.
ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ತಂಡದ ಸುನೀಲ್ ಮೆಂಡೋನ್ಸಾ ಮಾತನಾಡಿ, ವಿದ್ಯಾರ್ಥಿಗಳು ಕಲಿತ ಶಾಲೆಯನ್ನು , ಶಿಕ್ಷಣ ನೀಡಿದ ಶಿಕ್ಷಕರನ್ನು ಮರೆಯದಿರಿ, ನೀವು ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೆ ಹೋದಾಗ ನಿಮ್ಮಿಂದಾದ ಸಹಾಯವನ್ನು ನೀವು ಕಲಿತ ಶಾಲೆಗೆ ಮಾಡಿ ಎಂದು ಸಲಹೆ ನೀಡಿದರು.
ಎಸ್.ಎಸ್.ಎಲ್.ಸಿ ಯಲ್ಲಿ ಡಿಸ್ಟಿಂಕ್ಸನ್ ನಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಾದ ಭವ್ಯಶ್ರೀ, ಹರ್ಷಿತಾ, ದೀಕ್ಷಿತಾ, ಅರ್ಪಣಾ ನಾಯಕ್ , ಅಖಿಲ್ ತಸ್ಲೀಮಾ, ಸಮೀಕ್ಷಾ ಅವರನ್ನು ಹಳೆ ವಿದ್ಯಾರ್ಥಿಗಳಾದ ವತಿಯಿಂದ ಗೌರವಧನ ನೀಡಿ ಗೌರವಿಸಲಾಯಿತು.


ಶಾಲಾ ಸಂಚಾಲಕ ಜಯಪ್ರಕಾಶ್ ಪಡಿವಾಳ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಲೀಲಾ, ಕಲ್ಲಮುಂಡ್ಕೂರು ಸರ್ವೋದಯ ಫ್ರೆಂಡ್ಸ್ ನ ಅಧ್ಯಕ್ಷ ಸುಕುಮಾರ್ ಅಮೀನ್, ಸ್ಪೂರ್ತಿ ವಿಶೇಷ ಶಾಲೆಯ ಸಂಚಾಲಕ ಪ್ರಕಾಶ್ ಜೆ ಶೆಟ್ಟಿಗಾರ್ , ಆಡಳಿತ ಮಂಡಳಿಯ ಸದಸ್ಯ ವರದರಾಯ್ ಕಾಮತ್, ನರಸಿಂಹ ಮಡಿವಾಳ,ಹಳೆ ವಿದ್ಯಾರ್ಥಿಗಳಾದ ಪ್ರಕಾಶ್ ಮಿರಾಂದ, ಸಂದೀಪ್ ಸುವರ್ಣ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಸದಾನಂದ ಪೂಜಾರಿ ಸ್ವಾಗತಿಸಿದರು. ಶಿಕ್ಷಕ ಶಂಕರ್ ನಾಯ್ಕ್ ನಿರೂಪಿಸಿ, ಧನ್ಯವಾದಗೈದರು.

LEAVE A REPLY

Please enter your comment!
Please enter your name here